ಬುಧವಾರ, ಜೂನ್ 23, 2021
28 °C

ತ್ಯಾಜ್ಯ ಗುಂಡಿಗೆ ಬಿದ್ದು ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ (ದಕ್ಷಿಣ ಕನ್ನಡ): ಮಂಗಳೂರು ತಾಲ್ಲೂಕಿನ ಮೂಡುಬಿದಿರೆ ಮಾರ್ಪಾಡಿ ಗ್ರಾಮದ ಅಲಂಗಾರಿನಲ್ಲಿ ಶನಿವಾರ ಮಧ್ಯಾಹ್ನ ದನದ ಕೊಟ್ಟಿಗೆಯ ತ್ಯಾಜ್ಯ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿದೆ.

ಮಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿರುವ ವಿಶ್ವನಾಥ ಶೆಟ್ಟಿ ಎಂಬುವವರ ಪುತ್ರ ಸೂರಜ್ ಮೃತ ದುರ್ದೈವಿ.

 

ತಾಯಿ ಮತ್ತು ಸೂರಜ್ ಮಧ್ಯಾಹ್ನ ನೆರೆಮನೆಗೆ ತೆರಳಿದ್ದರು. ನೆರೆಮನೆ ಹುಡುಗನೊಟ್ಟಿಗೆ ಮಗು ಆಟವಾಡುತ್ತಿದ್ದುದರಿಂದ ತಾಯಿಯೊಬ್ಬರೇ ಮನೆಗೆ ವಾಪಸಾದರು. ನಂತರ ಮನೆಯತ್ತ ಹೊರಟ ಸೂರಜ್ ಮನೆ ಪಕ್ಕದ ತ್ಯಾಜ್ಯ ಗುಂಡಿಗೆ ಬಿದ್ದುಬಿಟ್ಟ.ಸ್ವಲ್ಪ ಸಮಯದ ಬಳಿಕ ನೋಡಿದ ಹಾದಿಹೋಕರು ಗುಂಡಿಯಲ್ಲಿ ಒದ್ದಾಡುತ್ತಿದ್ದ ಮಗುವನ್ನು ಮೇಲಕ್ಕೆತ್ತಿದ್ದರು. ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಸೂರಜ್ ಕೊನೆಯುಸಿರೆಳೆದ.`ತ್ಯಾಜ್ಯದ ಗುಂಡಿಗೆ ತಡೆಗೋಡೆ ಇರಲಿಲ್ಲ. ನೆಲಕ್ಕೆ ಸಮತಟ್ಟಾಗಿ ತ್ಯಾಜ್ಯದ ನೀತಿತ್ತು. ದಾರಿಯೆಂದು ಭಾವಿಸಿ ಕಾಲಿಟ್ಟ ಮಗು ಗುಂಡಿಗೆ ಬಿದ್ದು, ಮೇಲೆ ಬರಲಾಗದೆ ಒದ್ದಾಡಿದೆ~ ಎಂದು ಸ್ಥಳೀಯರು`ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.