ತ್ಯಾಜ್ಯ ಪರಿಹಾರವೂ ಆಕಾಶ ದೀಪವೂ

7

ತ್ಯಾಜ್ಯ ಪರಿಹಾರವೂ ಆಕಾಶ ದೀಪವೂ

Published:
Updated:

ಮನೆ ಮನೆಯಿಂದಲೇ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಆರಂಭವಾಗಬೇಕೆಂಬ ಸಂದೇಶಕ್ಕೆ ಒತ್ತು ನೀಡುವ ಸಲುವಾಗಿ ವೈಟ್‌ಫೀಲ್ಡ್‌ನ ಯೂರೋ ಸ್ಕೂಲ್ ಇಂಟರ್‌ನ್ಯಾಷನಲ್ ಈಚೆಗೆ `ಸಿಟಿ ಲೈಟ್ಸ್~ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು.ವಿದ್ಯಾರ್ಥಿಗಳು `ಆಕಾಶ ದೀಪ~ಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಆಕರ್ಷಕ ಚಾಲನೆ ನೀಡಿದರು. ಈ ವೇಳೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ನಾಗರಿಕರ ಪಾತ್ರ ಕುರಿತು ಚರ್ಚಿಸಲಾಯಿತು. ಜತೆಗೆ ನಾಗರಿಕರ ನಡುವೆ ಸಂಪರ್ಕ ಏರ್ಪಡಿಸಿ, ತ್ಯಾಜ್ಯ ನಿರ್ವಹಣೆಗೆ ಸೂಕ್ತ ಪರಿಹಾರ ಕಂಡುಕೊಳ್ಳವ ಬಗ್ಗೆಯೂ ಚಿಂತಿಸಲಾಯಿತು.`ಮನೆಗಳಿಂದ ಮತ್ತು ವಾಣಿಜ್ಯ ಸಂಸ್ಥೆಗಳಿಂದ ಬಹಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಜೈವಿಕ, ಅಜೈವಿಕ ಹಾಗೂ ಅಪಾಯಕಾರಿ ತ್ಯಾಜ್ಯವೂ ಸೇರಿದೆ. ಇದನ್ನು ಸರಿಯಾಗಿ ವಿಲೇವಾರಿ ಮಾಡದಿದ್ದಲ್ಲಿ, ಪರಿಸರಕ್ಕೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುತ್ತದೆ.ಸ್ಥಳೀಯವಾಗಿ ಜೈವಿಕ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡಬಹುದು. ಜೈವಿಕ ತ್ಯಾಜ್ಯವನ್ನು ಪುನರ್ಬಳಕೆ ಮಾಡುವುದರಿಂದ ಕೊಳೆಯಲಾರದ ತ್ಯಾಜ್ಯವನ್ನು ಹೂಳಲು ಸ್ಥಳ ದೊರೆತಂತಾಗುತ್ತದೆ ಹಾಗೂ ಪುನರ್ಬಳಕೆಯ ವಸ್ತುಗಳೂ ತಯಾರಾಗುತ್ತವೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಜಾಗೃತರಾಗುತ್ತಾರೆ~ ಎಂದವರು ಯುರೋ ಸ್ಕೂಲ್ ಆಡಳಿತ ಮಂಡಳಿ ಮುಖ್ಯಸ್ಥ ಆಂಡೀ ಗ್ರೇ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಎನ್. ಆಚಾರ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಶಾ ದೀಪಗಳು ಎಂದೂ ಕರೆಸಿಕೊಳ್ಳುವ ಆಕಾಶ ದೀಪಗಳನ್ನು ವಿದ್ಯಾರ್ಥಿಗಳು ಗಗನಕ್ಕೆ ಹಾರಿಸುವುದರ ಮೂಲಕ ಸರಿಯಾದ ತ್ಯಾಜ್ಯ ನಿರ್ವಹಣೆಯಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry