ತ್ಯಾಜ್ಯ ವಿಲೇವಾರಿ ಅಭಿಯಾನ

7

ತ್ಯಾಜ್ಯ ವಿಲೇವಾರಿ ಅಭಿಯಾನ

Published:
Updated:
ತ್ಯಾಜ್ಯ ವಿಲೇವಾರಿ ಅಭಿಯಾನ

ಬೆಂಗಳೂರು: ಗಣರಾಜ್ಯೋತ್ಸವದ ದಿನವಾದ ಶನಿವಾರ ಮಲ್ಲೇಶ್ವರ ಬಡಾವಣೆ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಇನ್ನು 365 ದಿನಗಳಲ್ಲಿ ಇಡೀ ಪ್ರದೇಶ ಶೂನ್ಯ ತ್ಯಾಜ್ಯ ವಲಯವಾಗಬೇಕು ಎನ್ನುವ ಸಂಕಲ್ಪದಿಂದ ನಾಗರಿಕರು, ಜನಪ್ರತಿನಿಧಿಗಳು ಒಟ್ಟಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.ನಮ್ಮ ಸ್ವಚ್ಛ ಮಲ್ಲೇಶ್ವರ ಅಭಿಯಾನದ ಅಂಗವಾಗಿ `ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಪಾತ್ರ' ಎನ್ನುವ ವಿಷಯವಾಗಿ ವಿಚಾರ ಗೋಷ್ಠಿಯೂ ನಡೆಯಿತು. ಅಪಾರ್ಟ್‌ಮೆಂಟ್ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, `ತ್ಯಾಜ್ಯ ನಿರ್ವಹಣೆಯಲ್ಲಿ ಮುಂದಿರುವ ಮಲ್ಲೇಶ್ವರ, ಕಸಮುಕ್ತ ಪ್ರದೇಶ ಆಗುವಲ್ಲಿಯೂ ದಿಟ್ಟ ಹೆಜ್ಜೆ ಇಟ್ಟಿದೆ' ಎಂದರು.`ನಾವು ಉತ್ಪಾದನೆ ಮಾಡುವ ಕಸವನ್ನು ನಾವೇ ವಿಲೇವಾರಿ ಮಾಡುವುದು ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದ್ದು, ಆದ್ದರಿಂದ ಸಾರ್ವಜನಿಕರು ಗುಂಪುಗಳನ್ನು ಮಾಡಿಕೊಂಡು ಈಗಿನಿಂದಲೇ ಅದಕ್ಕೆ ಸನ್ನದ್ಧರಾಗಬೇಕು' ಎಂದು ಸಲಹೆ ನೀಡಿದರು.ಒಣ ತ್ಯಾಜ್ಯವನ್ನು ಉದ್ಯಾನಗಳಲ್ಲಿ ಗೊಬ್ಬರವಾಗಿ ಬಳಕೆ ಮಾಡುವುದು, ಅನಿಲ ಘಟಕ ನಡೆಸುವುದು, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಬಡಾವಣೆ ಜನರಿಗೆ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡುವ ಸಲುವಾಗಿ `ನಮ್ಮ ಮಲ್ಲೇಶ್ವರ' ವೇದಿಕೆ ಆರಂಭಿಸಲಾಗಿದ್ದು, ವರ್ಷದ ಎಲ್ಲ ದಿನವೂ ಅಗತ್ಯವಾದ ಮಾಹಿತಿ, ಮಾರ್ಗದರ್ಶನ ಮತ್ತು ಸಹಾಯವನ್ನು ಈ ವೇದಿಕೆ ನೀಡಲಿದೆ ಎಂದು ಹೇಳಿದರು.ಸುರಕ್ಷಿತ ವಿಲೇವಾರಿ ಮಾಡುವುದು ಮೊದಲಾದ ಪ್ರಾತ್ಯಕ್ಷಿಕೆಗಳನ್ನು ಸ್ಥಳದಲ್ಲಿ ಏರ್ಪಾಡು ಮಾಡಲಾಗಿತ್ತು. ಹಲವು ಸಂಸ್ಥೆಗಳು ನೂತನ ತಂತ್ರಜ್ಞಾನ ಬಳಸಿದ ಸಲಕರಣೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry