ತ್ಯಾಜ್ಯ ಸಂಗ್ರಹಕ್ಕೆ ಕಾಂಪ್ಯಾಕ್ಟ್ ಲಾರಿ

7

ತ್ಯಾಜ್ಯ ಸಂಗ್ರಹಕ್ಕೆ ಕಾಂಪ್ಯಾಕ್ಟ್ ಲಾರಿ

Published:
Updated:

ಬೆಂಗಳೂರು: ತ್ಯಾಜ್ಯ ಸಂಗ್ರಹಿಸಲು ಬಳಸಲಾಗುವ ಹೊಸ ನಾಲ್ಕು ಕಾಂಪ್ಯಾಕ್ಟ್ ಲಾರಿಗಳ ಸೇವೆಗೆ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್‌ಬುಧವಾರ ರಾಜಾಜಿನಗರದಲ್ಲಿಚಾಲನೆ ನೀಡಿದರು.ರಾಜಾಜಿನಗರ, ಪ್ರಕಾಶ್ ನಗರ ಹಾಗೂ ಶ್ರೀರಾಮ ಮಂದಿರ ವಾರ್ಡ್‌ಗಳಲ್ಲಿನ ತ್ಯಾಜ್ಯವನ್ನು ಸಂಗ್ರಹಿಸಲು ಈ ಲಾರಿಗಳನ್ನು ಬಳಸಲಾಗುವುದು. ಇವು ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿವೆ. ಮುಂದಿನ ದಿನಗಳಲ್ಲಿ ಈ ಮಾದರಿಯ ಲಾರಿಗಳನ್ನು ಇತರ ವಾರ್ಡಗಳಿಗೂ ವಿಸ್ತರಿಸುವ ಯೋಚನೆ ಇದೆ ಎಂದು  ಅಧಿಕಾರಿಗಳು ತಿಳಿಸಿದರು.ಕಾಂಪ್ಯಾಕ್ಟ್ ಲಾರಿಯ ವಿಶೇಷತೆ: ಸಾಮಾನ್ಯವಾದ ಲಾರಿಗಳಲ್ಲಿ 4 ಟನ್ ಕಸ ಸಾಗಿಸಬಹುದಾದರೆ, ಈ ಲಾರಿಗಳಲ್ಲಿ 12 ಟನ್‌ಗಳಷ್ಟು ತ್ಯಾಜ್ಯವನ್ನು ಸಾಗಿಸಬಹುದು. ಮಾರ್ಗ ಮಧ್ಯೆ ಕಸ ಹೊರಗೆ ಬೀಳುವುದಿಲ್ಲ, ದೂರ್ವಾಸನೆ ಹೊರಹೊಮ್ಮುವುದಿಲ್ಲ. ಪ್ರತಿ ಲಾರಿ ಬೆಲೆ ರೂ 25 ಲಕ್ಷ.ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ರವೀಂದ್ರನ್, ಕೃಷ್ಣಪ್ಪ, ಜಯರತ್ನ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry