ತ್ರಿಚಕ್ರ ಸೈಕಲ್ ವಿತರಣೆ

7

ತ್ರಿಚಕ್ರ ಸೈಕಲ್ ವಿತರಣೆ

Published:
Updated:

ಮಹದೇವಪುರ:  ಅಂಗವಿಕಲರು ತಮ್ಮ ಮನೆಯಲ್ಲೇ ದುಡಿದು ಹಣ ಗಳಿಸುವಂತಹ ಸಣ್ಣ ಪ್ರಮಾಣದ ಉದ್ಯಮಗಳಿಗೆ ಪಾಲಿಕೆಯು ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿದೆ ಎಂದು ಬಿಬಿಎಂಪಿ ಸದಸ್ಯ ಎಸ್.ಉದಯ ಕುಮಾರ್ ಹೇಳಿದರು.

ಮಹಾನಗರ ಪಾಲಿಕೆ ವತಿಯಿಂದ ಇತ್ತೀಚೆಗೆ ವರ್ತೂರು ವಾರ್ಡ್ ಕಚೇರಿಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ಸೈಕಲ್‌ಗಳನ್ನು ವಿತರಿಸಿದ ಅವರು ಮಾತನಾಡಿದರು.

ಗುಂಜೂರು, ಮುನ್ನೆಕೊಳ್ಳಾಲು ಹಾಗೂ ಪಣತ್ತೂರು ಗ್ರಾಮದ ಹತ್ತು ಫಲಾನುಭವಿಗಳಿಗೆ ತ್ರಿಚಕ್ರ ಸೈಕಲ್‌ಗಳನ್ನು ವಿತರಿಸಲಾಯಿತು.

ಇದೇ ವೇಳೆ ಅಂಗವಿಕಲರಿಗೆ ಮಾಸಿಕ ವೇತನ ಪ್ರಮಾಣ ಪತ್ರವನ್ನೂ ನೀಡಲಾಯಿತು.

ವರ್ತೂರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ವಿ.ಸತೀಶ ಕುಮಾರ್, ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ ರೆಡ್ಡಿ, ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry