ತ್ರಿಪುರಾದಲ್ಲಿ ಮತ್ತೆ ಸಿಪಿಎಂ `ಸರ್ಕಾರ್'

7

ತ್ರಿಪುರಾದಲ್ಲಿ ಮತ್ತೆ ಸಿಪಿಎಂ `ಸರ್ಕಾರ್'

Published:
Updated:
ತ್ರಿಪುರಾದಲ್ಲಿ ಮತ್ತೆ ಸಿಪಿಎಂ `ಸರ್ಕಾರ್'

ಅಗರ್ತಲಾ(ಐಎಎನ್‌ಎಸ್): ತ್ರಿಪುರಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸಿಪಿಎಂ ಭಾರಿ ಜಯಗಳಿಸುವ ಮೂಲಕ ಸತತ ಐದನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.ವಿಧಾನಸಭೆಯ ಒಟ್ಟು 60 ಸ್ಥಾನಗಳಲ್ಲಿ ಸಿಪಿಎಂ 49 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಕೇವಲ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಭಾರಿ ಮುಖಭಂಗ ಅನುಭವಿಸಿದೆ. ಸಿಪಿಐ ಒಂದು ಸ್ಥಾನದಲ್ಲಿ ಜಯ ಸಾಧಿಸಿದೆ.1978ರ ಬಳಿಕ ಸಿಪಿಎಂ ಕಂಡ ದೊಡ್ಡ ಗೆಲುವು ಇದಾಗಿದೆ. ಅಂದು ಅದು 56 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು.`ಅಭಿವೃದ್ಧಿ, ಶಾಂತಿ, ಸ್ಥಿರತೆ ಮತ್ತು ಉತ್ತಮ ಆಡಳಿತಕ್ಕೆ ಸಂದ ಜಯ ಇದಾಗಿದೆ' ಎಂದು ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.`ಉಗ್ರಗಾಮಿಗಳ ಚಟುವಟಿಕೆಗಳನ್ನು ಹತ್ತಿಕ್ಕಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಜನ ಸಿಪಿಐಎಂ ಅನ್ನು ಪುನಃ ಅಧಿಕಾರಕ್ಕೆ ತಂದಿದ್ದಾರೆ' ಎಂದರು.ಪಶ್ವಿಮ ತ್ರಿಪುರದ ಧನಪುರ ಕ್ಷೇತ್ರದಿಂದ ಜಯಶೀಲರಾಗಿರುವ ಸರ್ಕಾರ್, ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಸತತ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ ದಾಖಲೆ ಅವರದು.ಉಪಚುನಾವಣೆ: ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಎಡಪಕ್ಷಗಳು ತಲಾ ಒಂದೊಂದು ಸ್ಥಾನವನ್ನು ಗಳಿಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry