ಬುಧವಾರ, ಡಿಸೆಂಬರ್ 11, 2019
26 °C
ಪಂಚರಂಗಿ

ತ್ರಿಭಾಷಾ ಚಿತ್ರದಲ್ಲಿ ಶ್ರೀದೇವಿ

Published:
Updated:
ತ್ರಿಭಾಷಾ ಚಿತ್ರದಲ್ಲಿ ಶ್ರೀದೇವಿ

ಶ್ರೀದೇವಿ ಮತ್ತೆ ತ್ರಿಭಾಷಾ ಚಿತ್ರಗಳಲ್ಲಿ ಮಿಂಚಲಿದ್ದಾರೆ... ಅಂತ ತೆಲುಗು ಚಿತ್ರಕತೆಗಾರ ಕೋನಾ ವೆಂಕಟ್‌ ಟ್ವೀಟಿಸಿದ್ದಾರೆ.‘ದೂಕುಡು’, ‘ಡಾನ್‌ ಸೀನು’, ‘ರೆಡಿ’ ಮುಂತಾದ ಚಿತ್ರಗಳಿಂದ ಖ್ಯಾತಿಯಾಗಿರುವ ವೆಂಕಟ್‌ ಈಚೆಗೆ ಶ್ರೀದೇವಿಯವರನ್ನು ಭೇಟಿ ಮಾಡಿರುವುದಾಗಿ ವಿವರ ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀದೇವಿಗೆ ಕತೆಯೊಂದನ್ನು ಹೇಳಲಾಯಿತು. ಕತೆಯನ್ನು ಇಷ್ಟಪಟ್ಟಿರುವ ಶ್ರೀದೇವಿ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ.ಮೂರು ಭಾಷೆಯಲ್ಲಿ ಚಿತ್ರ ನಿರ್ಮಿಸುವ ತೀರ್ಮಾನಕ್ಕೆ ಬರಲಾಗಿದೆ. ಶ್ರೀದೇವಿ ಬೋನಿಕಪೂರ್‌ ಈ ಪ್ರಾಜೆಕ್ಟನ್ನು ಒಪ್ಪಿಕೊಂಡಿದ್ದಾರೆ. ಹೆಸರು, ನಿರ್ದೇಶಕ ಮುಂತಾದವೆಲ್ಲ ಇನ್ನಷ್ಟೇ ತೀಮಾರ್ನವಾಗಬೇಕಿದೆ ಎಂದೆಲ್ಲ ಮಾಹಿತಿ ನೀಡಿದ್ದಾರೆ.ಕಳೆದ ವರ್ಷ ‘ಇಂಗ್ಲಿಷ್‌–ವಿಂಗ್ಲಿಷ್‌’ ಚಿತ್ರದ ಯಶಸ್ಸಿನ ನಂತರ ಶ್ರೀದೇವಿ ಇನ್ನೊಂದು ಚಿತ್ರದಲ್ಲಿ ನಟಿಸುವ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಬೃಹತ್‌ ಪ್ರಾಜೆಕ್ಟ್‌ ಬಗ್ಗೆ ವೆಂಕಟ್‌ ತೇಲಿಬಿಟ್ಟಿರುವ ಈ ಸಂದೇಶ ಬಿ–ಟೌನ್‌ನಲ್ಲಿ ಚರ್ಚೆಗೆ ಆಸ್ಪದ ನೀಡಿದೆ. 

ಪ್ರತಿಕ್ರಿಯಿಸಿ (+)