ಶುಕ್ರವಾರ, ಜೂನ್ 25, 2021
22 °C

ತ್ರಿವೇದಿ ನಿರ್ಗಮನ: ಪ್ರಧಾನಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದಿನೇಶ ತ್ರಿವೇದಿ ಅವರ ರಾಜೀನಾಮೆ ವಿಚಾರವನ್ನು ಸೋಮವಾರ ಲೋಕಸಭೆಯಲ್ಲಿ ಪ್ರಕಟಿಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಪೂರ್ವಾಧಿಕಾರಿ ಮಮತಾ ಬ್ಯಾನರ್ಜಿ ಅವರ ಭವಿಷ್ಯದ ದೃಷ್ಟಿಯ ಚೌಕಟ್ಟಿನಲ್ಲೇ ನೂತನ ವರ್ಷದ ರೈಲ್ವೇ ಮುಂಗಡಪತ್ರ ಮಂಡಿಸಿದ ರೈಲ್ವೇ ಸಚಿವರ ನಿರ್ಗಮನಕ್ಕಾಗಿ ವಿಷಾದ ವ್ಯಕ್ತ ಪಡಿಸಿದರು.ರೈಲ್ವೇ ಮುಂಗಪತ್ರದಲ್ಲಿ ರೈಲ್ವೇ ಪ್ರಯಾಣ ದರ ಏರಿಸಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರ ಒತ್ತಡಕ್ಕೆ ಒಳಗಾಗಿ ತ್ರಿವೇದಿ ಅವರನ್ನು ಸಂಪುಟದಿಂದ ಕೈಬಿಡಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ ಸಿಂಗ್ ~ನೂತನ ರೈಲ್ವೇ ಸಚಿವರು ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.~ರೈಲ್ವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ದಿನೇಶ ತ್ರಿವೇದಿ ಅವರು ಕಳುಹಿಸಿದ ಔಪಚಾರಿಕ ಪತ್ತ ಮತ್ತು ಮಿಂಚಂಚೆ (ಇ-ಮೇಲ್)  ಮೂಲಕ ಕಳುಹಿಸಿದ ಪತ್ರ ಕಳೆದ ರಾತ್ರಿ ತಡವಾಗಿ ನನಗೆ ತಲುಪಿದೆ ಎಂದು ಪ್ರಧಾನಿ ಲೋಕಸಭೆಗೆ ತಿಳಿಸಿದರು.ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರಿಸುತ್ತಿದ್ದರು.ಪತ್ರವನ್ನು ಅಂಗೀಕರಿಸುವಂತೆ ಶಿಫಾರಸು ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವೆ ಎಂದು ಹೇಳಿದ ಸಿಂಗ್ , ತ್ರಿವೇದಿ ನಿರ್ಗಮನಕ್ಕಾಗಿ ನಾನು ವಿಷಾದಿಸುವೆ ಎಂದು ಬೆನ್ನಲ್ಲೇ ನುಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.