ಗುರುವಾರ , ಅಕ್ಟೋಬರ್ 17, 2019
21 °C

ತ್ರಿಶಂಕು ಸ್ಥಿತಿಯಲ್ಲಿ ಕಬ್ಬು ಬೆಳೆಗಾರರು

Published:
Updated:

ಹಾವೇರಿ: ಜಿಲ್ಲೆಯಲ್ಲಿ ಇದ್ದೊಂದು ಸಕ್ಕರೆ ಕಾರ್ಖಾನೆಯೂ ಸ್ಥಗಿತ, ಎದುರಿನದಲ್ಲಿ ಕಾರ್ಖಾನೆ ಇದ್ದರೂ ಕಬ್ಬು ಇಳಿಸಲಾಗದ ಸ್ಥಿತಿ, ರೈತರ ಕಬ್ಬು ತೆಗೆದುಕೊಳ್ಳಲು ಬೇರೆ ಜಿಲ್ಲೆಗಳ ಕಾರ್ಖಾನೆ ಮಾಲೀಕರ ನಿರುತ್ಸಾಹ, ಹೊಲದ ್ಲಲಿಯೇ ಒಣಗುತ್ತಿರುವ ಕಟಾವು ಮಾಡಿದ ಕಬ್ಬು...!ಕಟಾವು ಮಾಡಿ ಹೊಲದಲ್ಲಿಯೇ ಬಿಟ್ಟ ಕಬ್ಬು ಇತ್ತ ಕಾರ್ಖಾನೆಗೂ ಸಾಗಿಸಲಾಗದೇ ಅತ್ತ ಅದನ್ನು ಉಳಿಸಿಕೊಳ್ಳಲಾಗದೇ ತ್ರಶಂಕು ಸ್ಥಿತಿಯಲ್ಲಿರುವ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಸಂಗೂರಿನ ಜಿ.ಎಂ.ಶುಗರ್ಸ್‌ ಮೇಲೆ ವಿಶ್ವಾಸವಿಟ್ಟು ಹಾಗೂ ಕಾರ್ಖಾನೆ ಜತೆ ಒಡಂಬಡಿಕೆ ಮಾಡಿಕೊಂಡು ರೈತರು ಜಿಲ್ಲೆಯಲ್ಲಿ 3 ಲಕ್ಷ ಟನ್‌ಗೂ ಅಧಿಕ ಕಬ್ಬು ಬೆಳೆದಿದ್ದಾರೆ.ಕಾರ್ಖಾನೆ ಆರಂಭವಾಗುವುದು ಒಂದು ತಿಂಗಳು ವಿಳಂಬವಾದಾಗಲೇ ಕಬ್ಬು ಬೆಳೆಗಾರರು ಚಿಂತೆಗೀಡಾಗಿದ್ದರು. ಕೊನೆಗೆ ಹೋರಾಟದ ಮೂಲಕ ಕಾರ್ಖಾನೆ ಮಾಲೀಕರ ಮೇಲೆ ಒತ್ತಡ ತಂದು ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಲು ಯಶಸ್ವಿಯಾಗಿದ್ದರು. ಇದರಿಂದ ಸಂತಸಗೊಂಡ ರೈತರು ಈ ವರ್ಷದ ಕಬ್ಬಿನ ಸಮಸ್ಯೆ ಬಗೆಹರಿಯಿತೆಂದು ನಿಟ್ಟುಸಿರುವ ಬಿಟ್ಟಿದ್ದರು.ಆದರೆ, ಅವರ ಸಂತಸ ಬಹಳ ದಿನ ಉಳಿಯಲಿಲ್ಲ. ಕಾರ್ಖಾನೆ ಯಂತ್ರೋಪಕರಣಗಳನ್ನು ಸಂಪೂರ್ಣ ನವೀಕರಣ ಮಾಡಿದ್ದರ ಪರಿಣಾಮ ಕಾರ್ಖಾನೆ ಕಬ್ಬು ನುರಿಸಲು ಆರಂಭಿಸಿದ ಎರಡೇ ದಿನದಲ್ಲಿ ಕೆಲ ತಾಂತ್ರಿಕ ಕಾರಂಗಳಿಂದ ನಿಂತುಬಿಟ್ಟಿತು. ಕಾರ್ಖಾನೆ ಪರವಾನಿಗೆ ಪಡೆದು ಕಬ್ಬು ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದರು. ಒಂದು ವಾರ ಕಾರ್ಖಾನೆ ಆರಂಭಿಸದೇ ಇದ್ದಾಗ, ಪ್ರತಿಭಟನೆ ನಡೆಸಿ ಪ್ರತಿ ಲೋಡ್‌ಗೆ ದಿನವೊಂದಕ್ಕೆ 200 ಕೆ.ಜಿ.ಹೆಚ್ಚುವರಿ ತೂಕ ಹಾಗೂ 500 ರೂ. ವಾಹನ ಬಾಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.ಬದಲಾಗದ ಸ್ಥಿತಿ: ವಾರದ ನಂತರ ಆರಂಭವಾದ ಸಕ್ಕರೆ ಕಾರ್ಖಾನೆ ನಾಲ್ಕೈದು ದಿನ ಕಾರ್ಯ ನಿರ್ವಹಿಸಿದರೂ, ಕಳೆದ ಸೋಮವಾರದಿಂದ ಜನರೇಟರ್ ಸಮಸ್ಯೆಯಿಂದ ಸ್ಥಗಿತ ಗೊಂಡಿದೆ. ಪದೇ ಪದೇ ಕಾರ್ಖಾನೆ ತನ್ನ ಕಾರ್ಯ ವನ್ನು ಸ್ಥಗಿತಗೊಳಿಸುತ್ತಿರುವುದು ರೈತರ ಚಿಂತೆಯನ್ನು ಇಮ್ಮಡಿಗೊಳಿಸಿದೆ. `ಯಾಕದ್ರೂ ಕಬ್ಬು ಕಟಾವು ಮಾಡಿದ್ವಿ ಇನ್ನಷ್ಟ್ ದಿನ ಹೊಲದಲ್ಲಿಯೇ ಬಿಟ್ಟಿದ್ದರೆ ಚಲೋ ಆಗು ತಿತ್ತು. ಕಾರ್ಖಾನೆಯವರು ಕಬ್ಬು ಕಟಾವಿಗೆ ಪರವಾನಿಗೆ ನೀಡಿ ಈಗ ಕಾರ್ಖಾನೆ ಬಂದ್ ಆಗಿದೆ. ಅದು ಶುರುವಾದ ಮೇಲೆ ಕಬ್ಬು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿ ರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ.ಹೊಲದಲ್ಲಿ ಇದ್ದರೆ ಕಬ್ಬಿಗೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಈಗ ಕಟಾವು ಮಾಡಿದ ಮೇಲೆ ದಿನದಿಂದ ದಿನಕ್ಕೆ ಕಬ್ಬು ಒಣಗಿ ತನ್ನ ತೂಕವನ್ನು ಕಳೆದುಕೊಳ್ಳುತ್ತದೆ. ಅಲ್ಲದೇ ಕಬ್ಬಿನ ಲೋಡ್‌ಗಳು ಕಾರ್ಖಾನೆ ಎದುರಿನಲ್ಲಿಯೇ ಒಂದು ವಾರಗಟ್ಟಲೆ ನಿಂತರೆ ವಾಹನ ಬಾಡಿಗೆ, ಆಳುಗಳ ಕೂಲಿ ಕೊಡುವವರ‌್ಯಾರು.  ಇನ್ನೂ ಹೊಲದಲ್ಲಿಯೇ ಕಡಿದ ಹಾಕಿದ ಕಬ್ಬಿನ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಗೌರವ ಅಧ್ಯಕ್ಷ ಶಿವಾನಂದ ಗುರುಮಠ.ಕಾರ್ಖಾನೆಗೆ ಸಾಗಿಸಿದ ಹಾಗೂ ಹೊಲದಲ್ಲಿ ಈಗಾಗಲೇ ಕಟಾವು ಮಾಡಿರುವ ಕಬ್ಬು ಕನಿಷ್ಠ 15 ಸಾವಿರ ಟನ್ ಕಬ್ಬು ಮಿಕ್ಕಿದೆ ಎನ್ನುತ್ತಾರೆ ಅವರು. ಆಡಳಿತ ಮಂಡಳಿಯು ಶುಕ್ರವಾರ(ಜ.6) ದೊಳಗೆ ಕಾರ್ಖಾನೆ ದುರಸ್ಥಿ ಪಡಿಸಿ ಶುಕ್ರವಾರದ(ಜ.6) ದೊಳಗೆ ಆರಂಭಿಸುವುದಾಗಿ ಹೇಳಿತ್ತು. ಆದರೆ, ಶುಕ್ರವಾರ ಸಂಜೆವರೆಗೆ ಕಬ್ಬು ಅರೆಯುವ ಪ್ರಕ್ರಿಯೆಯಾಗಲಿ, ಕಾರ್ಖಾನೆ ಆವರಣದಲ್ಲಿ  ನಿಂತ ನೂರಾರು ಕಬ್ಬಿನ ಲೋಡಗಳನ್ನು ಇಳಿಸುವ ಪ್ರಕ್ರಿಯೆಯಾಗಲಿ ನಡೆಯದಿಲ್ಲ. ಶನಿವಾರ ಬೆಳಿಗ್ಗೆ ಆರಂಭವಾಗದಿದ್ದರೆ, ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲು ಶನಿವಾರ ಮಧ್ಯಾಹ್ನದ ನಂತರ ಕಬ್ಬು ಬೆಳೆಗಾರರ ಸಭೆಯನ್ನು ಕರೆಯಲಾಗುವುದು ಎಂದು ರೈತ ಮುಖಂಡ ಗುರುಮಠ ತಿಳಿಸಿದ್ದಾರೆ.

Post Comments (+)