ತ್ರಿಶೂಲ್, ಖಾಲಿನ್ ಅತ್ಯುತ್ತಮ ಗಾಲ್ಫ್‌ರ್

6

ತ್ರಿಶೂಲ್, ಖಾಲಿನ್ ಅತ್ಯುತ್ತಮ ಗಾಲ್ಫ್‌ರ್

Published:
Updated:

ಬೆಂಗಳೂರು: ಕರ್ನಾಟಕದವರಾದ ಕೆ.ಜಿ.ಎ. ತಂಡದ ತ್ರಿಶೂಲ್ ಚಿನ್ನಪ್ಪ ಹಾಗೂ ಖಾಲಿನ್ ಜೋಶಿ ಅವರು ಇಂಡಿಯನ್ ಗಾಲ್ಫ್ ಯೂನಿಯನ್ ಪ್ರತಿ ವರ್ಷ ನೀಡುವ 2010-11ರ ಸಾಲಿನ ರೋಲೆಕ್ಸ್ ವಾರ್ಷಿಕ ಪ್ರಶಸ್ತಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕರ ಮತ್ತು ಅತ್ಯುತ್ತಮ ಸಾಧನೆ ತೋರಿದ ಆಟಗಾರ ಪ್ರಶಸ್ತಿ ಪಡೆದ ಗೌರವಕ್ಕೆ ಪಾತ್ರರಾದರು.ಭಾನುವಾರ ರಾತ್ರಿ ಕರ್ನಾಟಕ ಗಾಲ್ಫ್ ಸಂಸ್ಥೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರದ ಐವರು ಪ್ರತಿಭಾವಂತ ಗಾಲ್ಫ್ ಆಟಗಾರರನ್ನು ಐಜಿಯು ಆಯ್ಕೆ ಮಾಡಿ ಸನ್ಮಾನಿಸಿತು.ದೆಹಲಿಯ ಗುರ್‌ಬಾನಿ ಸಿಂಗ್ (ಜೂನಿಯರ್ ಬಾಲಕಿಯರು), ತ್ರಿಶೂಲ್ ಚಿನ್ನಪ್ಪ (ಜೂನಿಯರ್ ಬಾಲಕರು), ದೆಹಲಿಯ ಗೌರಿ ಮೊಂಗಾ (ಮಹಿಳಾ ವಿಭಾಗ), ಫರಿದಾಬಾದ್‌ನ ಅಭಿನವ್ ಲೋಹನ್ (ಪುರುಷರ ವಿಭಾಗ), ಕೆ.ಜಿ.ಎ. ತಂಡದ ಖಾಲಿನ್ ಜೋಶಿ (ಅತ್ಯುತ್ತಮ ಸಾಧನೆ) ಅವರಿಗೆ ರೋಲೆಕ್ಸ್ ಕಂಪೆನಿಯ ಪ್ರತಿನಿಧಿ ಅರ್ನಾಲ್ಡ್ ಲ್ಯಾಬೋರ್ಡ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry