ತ್ರೈಮಾಸಿಕ ಫಲಿತಾಂಶವೇ ನಿರ್ಣಾಯಕ

7

ತ್ರೈಮಾಸಿಕ ಫಲಿತಾಂಶವೇ ನಿರ್ಣಾಯಕ

Published:
Updated:
ತ್ರೈಮಾಸಿಕ ಫಲಿತಾಂಶವೇ ನಿರ್ಣಾಯಕ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತ್ರೈಮಾಸಿಕ ಹಣಕಾಸು ನೀತಿಯಲ್ಲಿ ರೆಪೊ ದರ ಇಳಿಸಿದರೂ, `ಜಿಡಿಪಿ' ಅಂದಾಜು ತಗ್ಗಿದ ಕಾರಣ ಸೂಚ್ಯಂಕ ಕಳೆದ ವಾರದ ಕೊನೆಯ 3 ವಹಿವಾಟು ಅವಧಿಯಲ್ಲಿ ಮೂರು ವಾರಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಇದರಿಂದ ಈ ವಾರವೂ  ಕಾರ್ಪೊರೇಟ್ ಫಲಿತಾಂಶಗಳೇ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಬ್ಯಾಂಕ್ ಆಫ್ ಬರೋಡಾ, ಟೆಕ್ ಮಹೀಂದ್ರಾ ಹಿಂಡಾಲ್ಕೊ ಈ ವಾರ 3ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.ಹೊಸ ಬ್ಯಾಂಕ್ ಸ್ಥಾಪನೆ ಪರವಾನಗಿಗೆ  ಸಂಬಂಧಿಸಿದಂತೆ `ಆರ್‌ಬಿಐ' ಪ್ರಕಟಿಸಲಿರುವ ಅಂತಿಮ ಮಾರ್ಗಸೂಚಿ ಸಹ ಪೇಟೆಯಲ್ಲಿ ಏರಿಳಿತ ಸೃಷ್ಟಿಸಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry