ಭಾನುವಾರ, ಮೇ 9, 2021
27 °C

ತ್ವರಿತ ಸೇವೆಗೆ ಪಿನ್‌ಕೋಡ್ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಭಾರತೀಯ ಅಂಚೆ ಇಲಾಖೆಯ ಗುಲ್ಬರ್ಗ ವಿಭಾಗದ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಅಂಚೆ ಸೂಚ್ಯಂಕ ಸಂಖ್ಯೆ (ಪಿನ್‌ಕೋಡ್) ಮಾಹಿತಿ ಹಾಗೂ ಗ್ರಾಹಕರ ಮೇಳ ನಡೆಯಿತು.ಪಿನ್‌ಕೋಡ್ ಸ್ಪಷ್ಟವಾಗಿ ಬಳಸುವುದರಿಂದ ಅಂಚೆ ಪತ್ರಗಳ ತ್ವರಿತ ವಿಂಗಡಣೆ ಮತ್ತು ವಿಲೇವಾರಿ ಸುಲಭಸಾಧ್ಯ. ಸರಿಯಾದ ವಿಳಾಸಕ್ಕೆ ಪತ್ರ ತಲುಪಲು ಸಹಕಾರಿ. ಅಲ್ಲದೇ ರವಾನಿಸಿದ  ಸ್ಪೀಡ್‌ಪೋಸ್ಟ್ ಮತ್ತು ರಿಜಿಸ್ಟರ್ಡ್‌ ಪೋಸ್ಟ್‌ನ ಸದ್ಯದ ಸ್ಥಿತಿಯನ್ನು ಅಂತರ್ಜಾಲ ಮೂಲಕ ತಿಳಿದುಕೊಳ್ಳಬಹುದು ಎಂದು ಹಿರಿಯ ಅಂಚೆ ಅಧೀಕ್ಷಕ ಡಿ.ಕಲ್ಯಾಣರಾವ ಹೇಳಿದರು.ಗ್ರಾಹಕರ ಪರವಾಗಿ ರುಸ್ತುಂಪುರ, ಸಲೀಂ ಬೇಗ, ಎಂ.ಡಿ.ಜೋಶಿ, ಜಗನ್ನಾಥ ಮತ್ತಿತರರು ಮಾತನಾಡಿದರು. ಪಿನ್‌ಕೋಡ್ ಡೈರೆಕ್ಟರಿಯನ್ನು ವಿತರಿಸಲಾಯಿತು. ಅಕ್ತರ್ ಆಲಿ ಮುದಗಲ್, ಅಧೀಕ್ಷಕ ಎಸ್.ಎಸ್.ಕಿಂಡಿಮಠ ಮತ್ತಿತರರು ಇದ್ದರು.ಜಾಥಾ: ಪಿನ್‌ಕೋಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ನೆಹರುಗಂಜ್ ಅಂಚೆ ಕಚೇರಿಯಿಂದ ಸೂಪರ್ ಮಾರ್ಕೆಟ್, ಸರ್ದಾರ್ ವಲ್ಲಭಭಾಯಿ ಚೌಕ ಮಖಾಂತರ ಸ್ಟೇಷನ್ ಬಜಾರ ಅಂಚೆಕಚೇರಿ ಮಾರ್ಗವಾಗಿ ಶರಣಬಸವೇಶ್ವರ ದೇಗುಲದಿಂದ ಪ್ರಧಾನ ಅಂಚೆ ಕಚೇರಿ ತನಕ ಸಾಗಿತು. ಪ್ರಧಾನ ಅಂಚೆಕಚೇರಿ ಪಾಲಕ ಕೆ.ಮಹಾದೇವಪ್ಪ ಜಾಥಾವನ್ನು ಬರಮಾಡಿಕೊಂಡಿದ್ದರು. ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಜಾಥಾದಲ್ಲಿ ಎಂ.ಸಿ. ಗುಡೂರ, ಎಂ.ಎನ್.ಎ. ಖಾನ್, ರಾಘವೇಂದ್ರ ರೆಡ್ಡಿ, ಬಸವರಾಜ ಮೇದಾ, ಎಸ್.ಡಿ.ಪಾಟೀಲ, ರೇವಣಸಿದ್ದಪ್ಪ, ರಾಮಮೋಹನ, ಶಂಕರಪ್ಪ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.