ಥಾಮಸ್ ಕಪ್: ಭಾರತ ತಂಡ ಶುಭಾರಂಭ

7

ಥಾಮಸ್ ಕಪ್: ಭಾರತ ತಂಡ ಶುಭಾರಂಭ

Published:
Updated:

ನವದೆಹಲಿ (ಪಿಟಿಐ): ಭಾರತ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಏಷ್ಯಾ ವಲಯದ ಮೊದಲ ಪಂದ್ಯದಲ್ಲಿ 3-2 ರಲ್ಲಿ ಸಿಂಗಪುರ ವಿರುದ್ಧ ಗೆಲುವು ಪಡೆಯಿತು.ಮಕಾವ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಪಿ. ಕಶ್ಯಪ್ 21-16, 21-19 ರಲ್ಲಿ ಜಿ ಲಿಯಾಂಗ್ ಡೆರಿಕ್ ಅವರನ್ನು ಮಣಿಸಿದರು. ಡಬಲ್ಸ್‌ನಲ್ಲಿ ರೂಪೇಶ್ ಕುಮಾರ್- ಸನಾವೆ ಥಾಮಸ್ ಜೋಡಿ 21-8, 21-15 ರಲ್ಲಿ ಜಾವೊ ಜಿಯಾಂಗ್- ಲಿಯು ಯಿ ಎದುರು ಜಯ ಸಾಧಿಸಿತು.ಸೌರಭ್ ವರ್ಮಾ 20-22, 16-21 ರಲ್ಲಿ ಯಾಂಗ್ ಜಾವೊ ಕೈಯಲ್ಲಿ ಪರಾಭವಗೊಂಡರು. ಆದರೆ ಅಕ್ಷಯ್ ದೇವಾಲ್ಕರ್ ಮತ್ತು ಪ್ರಣವ್ ಚೋಪ್ರಾ 21-19, 21-16 ರಲ್ಲಿ ಚಾಯುಟ್ ತ್ರಿಯಾಚಾರ್ಟ್- ಎಚ್.ಸಿ. ಜೆಫ್ರಿ ವಾಂಗ್ ಅವರನ್ನು ಮಣಿಸಿ ಭಾರತದ ಗೆಲುವು ಖಚಿತಪಡಿಸಿಕೊಂಡರು.ಯಾವುದೇ ಮಹತ್ವವಿಲ್ಲದ ಕೊನೆಯ ಸಿಂಗಲ್ಸ್‌ನಲ್ಲಿ ಆನಂದ್ ಪವಾರ್ 14-21, 21-6, 18-21 ರಲ್ಲಿ ಚಾವೊ ಹುವಾಂಗ್ ಎದುರು ಪರಾಭವಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry