ಶನಿವಾರ, ಜನವರಿ 18, 2020
20 °C

ಥಾಯ್ಲೆಂಡ್‌­­: ಪ್ರತಿಭಟನಾಕಾರರ ನೆರವಿಗೆ ಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್‌ (ಪಿಟಿಐ): ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಥಾಯ್ಲೆಂಡ್‌­­ನಲ್ಲಿ ಸರ್ಕಾರ ಬದಲಾವಣೆ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆ­ಸು­ತ್ತಿರುವ ನಾಯಕರಿಗೆ ವೇದಿಕೆ ಒದಗಿಸಿಕೊಡಲು ಸೇನೆ ಮುಂದಾಗಿದೆ.

ಆದರೆ ಸೇನೆ ಪ್ರತಿಭಟನಾಕಾರರ ಪರ ನಿಲ್ಲಲಿದೆಯೇ ಎಂಬ ನಿರ್ಧಾರವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಸೇನೆ ರಚಿಸಿರುವ ಹೊಸ ವೇದಿಕೆಯಲ್ಲಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಸಂಸದರು, ಶಿಕ್ಷಣ ತಜ್ಞರು ಇದ್ದಾರೆ.

ಪ್ರತಿಭಟನಾಕಾರರ ನೇತೃತ್ವ ವಹಿಸಿ­ರುವ ಸುಥೆಪ್‌ ತಾಗ್ಸುಬಾನ್‌, ಪ್ರಧಾನಿ ಯಿಂಗ್ಲುಕ್‌ ಶಿನವಾತ್ರ ಅಧಿಕಾರದಿಂದ ಕೆಳಗಿಳಿಯಬೇಕು ಹಾಗೂ ಚುನಾ­ವಣೆಗೆ ಮೊದಲು ಮಧ್ಯಂತರ ಸರ್ಕಾರ ರಚನೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

 

ಪ್ರತಿಕ್ರಿಯಿಸಿ (+)