ಥಾಯ್ಲೆಂಡ್‌ನ ತವೊರ್ನ್‌ಗೆ ಒಲಿದ ಪ್ರಶಸ್ತಿ

7

ಥಾಯ್ಲೆಂಡ್‌ನ ತವೊರ್ನ್‌ಗೆ ಒಲಿದ ಪ್ರಶಸ್ತಿ

Published:
Updated:
ಥಾಯ್ಲೆಂಡ್‌ನ ತವೊರ್ನ್‌ಗೆ ಒಲಿದ ಪ್ರಶಸ್ತಿ

ಬೆಂಗಳೂರು: ಅಂತಿಮ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಥಾಯ್ಲೆಂಡ್‌ನ ತವೊರ್ನ್ ವಿರಾಟ್‌ಚಾಂತ್ ಇಲ್ಲಿ ಕೊನೆಗೊಂಡ `ಹೀರೊ ಇಂಡಿಯನ್ ಓಪನ್~ ಗಾಲ್ಫ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮೊದಲ ಮೂರು ದಿನಗಳ ಕಾಲ ಮುನ್ನಡೆಯಲ್ಲಿದ್ದ ಸ್ಕಾಟ್ಲೆಂಡ್‌ನ ರಿಚೀ ರಾಮ್ಸೆ ಗೆಲುವಿನ ದಡದಲ್ಲಿ ಎಡವಿದರು. ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಭಾನುವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯ ಬಳಿಕ ತವೊರ್ನ್ ಮತ್ತು ರಾಮ್ಸೆ ತಲಾ 270 ಸ್ಕೋರ್‌ಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರು. ಇದರಿಂದ ವಿಜೇತರನ್ನು ನಿರ್ಣಯಿಸಲು `ಪ್ಲೇ ಆಫ್~ ಮೊರೆಹೋಗಲಾಯಿತು.ಥಾಯ್ಲೆಂಡ್‌ನ ಅನುಭವಿ ಆಟಗಾರ `ಪ್ಲೇ ಆಫ್~ನಲ್ಲಿ ರಾಮ್ಸೆ ಅವರನ್ನು ಮಣಿಸಿ ಚಾಂಪಿಯನ್ ಆದರು. ಮಿರುಗುವ ಟ್ರೋಫಿಯ ಜೊತೆಗೆ ಒಂದು ಕೋಟಿ 5 ಲಕ್ಷ ರೂ ನಗದು ಬಹುಮಾನ ತಮ್ಮದಾಗಿಸಿಕೊಂಡರು. ತವೊರ್ನ್‌ಗೆ ಪ್ರಸಕ್ತ ಋತುವಿನ ಏಷ್ಯನ್ ಟೂರ್‌ನಲ್ಲಿ ಒಲಿದ ಮೂರನೇ ಪ್ರಶಸ್ತಿ ಇದಾಗಿದೆ. ಥಾಯ್ಲೆಂಡ್‌ನ ಪನುಫೊಲ್ ಪಿಟಾಯಾರತ್ (271) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry