ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಸೈನಾ, ಕಶ್ಯಪ್‌ಗೆ ನಿರಾಸೆ

ಶನಿವಾರ, ಜೂಲೈ 20, 2019
28 °C

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಸೈನಾ, ಕಶ್ಯಪ್‌ಗೆ ನಿರಾಸೆ

Published:
Updated:

ನವದೆಹಲಿ (ಪಿಟಿಐ): ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಭಾರತದ ಸೈನಾ ನೆಹ್ವಾಲ್ ಅವರು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು.ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ 13-21, 12-21 ರಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಕ್ಸುರುಯ್ ಲಿ ಎದುರು ಪರಾಭವಗೊಂಡರು. ಅಗ್ರಶ್ರೇಯಾಂಕ ಹೊಂದಿದ್ದ ಸೈನಾ ಕೇವಲ 30 ನಿಮಿಷಗಳಲ್ಲಿ ಎದುರಾಳಿಗೆ ಶರಣಾದರು.ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರಾದ ಪಿ. ಕಶ್ಯಪ್ ಮತ್ತು ಸೌರಭ್ ವರ್ಮಾ ಅವರೂ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದ ಕಾರಣ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿದೆ.ಕಶ್ಯಪ್ ಅವರು 18-21, 5-21 ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಚೀನಾದ ಚೆನ್ ಲಾಂಗ್ ಎದುರು ಸೋಲು ಅನುಭವಿಸಿದರು. ಮತ್ತೊಂದು ಪಂದ್ಯದಲ್ಲಿ ಸೌರಭ್ 21-16, 16-21, 11-21 ರಲ್ಲಿ ಕೊರಿಯಾದ ಸುಂಗ್ ಹ್ವಾನ್ ಪಾರ್ಕ್ ಕೈಯಲ್ಲಿ ಪರಾಭವಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry