ಥಾಯ್ ಮೀನಿನ ಸವಿ...

7

ಥಾಯ್ ಮೀನಿನ ಸವಿ...

Published:
Updated:

ಒಳಗೆ ಕಾಲಿಡುತ್ತಿದ್ದಂತೆ ಥಾಯ್ಲೆಂಡ್‌ನಲ್ಲಿಯೇ ಇದ್ದೇವೇನೋ ಎನ್ನುವ ಅನುಭವ. ಕಣ್ಣು ಹಾಯಿಸಿದಲ್ಲೆಲ್ಲ ಅಲ್ಲಿನ ಜನಪ್ರಿಯ ಆನೆಯ ದಂತದ ಮುಖವಾಡ, ಬುದ್ಧನ ವಿವಿಧ ಭಂಗಿಯ ಮೂರ್ತಿಗಳು, ಇದರೊಂದಿಗೆ ಸಿಂಹದ ಪ್ರತಿಕೃತಿ. ಊಟದ ತಟ್ಟೆ, ಸಾಮಗ್ರಿ, ಖಾದ್ಯ, ರುಚಿ ಎಲ್ಲದರಲ್ಲೂ ಥಾಯ್ ಪ್ರಭಾವ. ಹಲಸೂರು ರಸ್ತೆ `ಬೆಂಜರಾಂಗ್~ ರೆಸ್ಟೊರೆಂಟ್ ಆಯೋಜಿಸಿರುವ ಸೀ ಫುಡ್ ಫೆಸ್ಟಿವಲ್‌ನಲ್ಲಿ ಈ ವಿಶೇಷಗಳೆಲ್ಲ ಇವೆ. ಸೀಗಡಿ, ಏಡಿ, ಮೀನಿನ ಖಾದ್ಯಗಳ ರುಚಿಯನ್ನು ಸವಿಯಬೇಕು ಎಂದು ಬಯಸುವವರನ್ನು ಇದು ಆಹ್ವಾನಿಸುತ್ತಿದೆ.ಗಾಯೆಂಗ್ ಸೋಮ್ ಚಾ-ಒಮ್-ಗಾಂಗ್ ಸ್ಪೈಸಿ ಸೂಪ್, ಗೂಂಗ್ ಪಹಡ್ ಆಹಬ್ ಡಾಯೆಂಗ್, ಪ್ಲಾ ಜಲ್ಮೆಟ್ ಟಾಡ್ ಸಮೂನ್‌ಪೈ, ಏಡಿಯನ್ನು ತೊಳೆದು ಮೆಣಸಿನ ಪೇಸ್ಟ್ ಅಂಟಿಸಿದ ಪ್ಲಾ ಕಾಂಪೊಂಗ್, ಮಾವಿನ ಹಣ್ಣಿನ ಸಲಾಡ್ ಮತ್ತು ಮೀನನ್ನು ಸಂಪೂರ್ಣ ಹಬೆಯಲ್ಲಿ ಬೇಯಿಸಿ ಮೀನಿನ ಸಾಸ್ ಹಾಕಿದ ಮ್ಯಾಂಗೋ ಸಲಾಡ್ ಮತ್ತು ಸ್ಟೀಮ್ ಫೀಶ್‌ಗಳೆಲ್ಲ ಇಲ್ಲಿವೆ.`ಬೆಂಗಳೂರಿನಲ್ಲಿ ಸಮುದ್ರ ಇಲ್ಲ. ಆದರೆ ಸಮುದ್ರದ ಸೀಗಡಿ, ಏಡಿ, ಮೀನಿನ ರುಚಿಕರ ಖಾದ್ಯಕ್ಕೆ ಮನೋತವರು ಇಲ್ಲಿ ಬೇಕಾದಷ್ಟು ಜನರಿದ್ದಾರೆ. ಅವರ ನಾಲಿಗೆ, ಹೊಟ್ಟೆ ತಣಿಸಲು ಇಲ್ಲಿ 30 ಖಾದ್ಯಗಳನ್ನು ನೀಡುತ್ತಿದ್ದೇವೆ~ ಎನ್ನುತ್ತಾರೆ ಈ ಹೊಟೇಲ್‌ನ ಮಾಸ್ಟರ್ ಶೇಫ್ ಆನಂದ್ ಕೃಷ್ಣ.ವಿದೇಶಿಯರು ಖಾದ್ಯಗಳನ್ನು ಹೆಚ್ಚಾಗಿ ಹಬೆಯಲ್ಲಿ ಬೇಯಿಸಿ ಸವಿಯುತ್ತಾರೆ. ನಮ್ಮಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಹಾಕಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಆಹಾರ ಮೇಳಕ್ಕಾಗಿ ಕೇರಳ, ಚೆನ್ನೈ, ಗೋವಾ, ಮಂಗಳೂರಿನಿಂದ ವಿಶೇಷವಾದ ಏಡಿ, ಮೀನು, ಸೀಗಡಿಗಳನ್ನು ತರಿಸುತ್ತಿದ್ದೇವೆ ಎನ್ನುತ್ತಾರೆ ಅವರು. ಆಹಾರೋತ್ಸವ ಅಕ್ಟೋಬರ್ 23ರ ವರೆಗೆ ನಡೆಯಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry