ಥಿಂಕ್ ನೆಕ್ಸ್ಟ್ ಕರಿಯರ್ ಇವೆಂಟ್

ಶನಿವಾರ, ಜೂಲೈ 20, 2019
24 °C

ಥಿಂಕ್ ನೆಕ್ಸ್ಟ್ ಕರಿಯರ್ ಇವೆಂಟ್

Published:
Updated:

ಮಣಿಪಾಲ್ ವಿ.ವಿ. ಬೆಂಗಳೂರು ಕ್ಯಾಂಪಸ್ ವಿದ್ಯಾರ್ಥಿಗಳಿಗಾಗಿ  ಶನಿವಾರ `ಥಿಂಕ್ ನೆಕ್ಸ್ಟ್~ ಕರಿಯರ್ ಇವೆಂಟ್ ಆಯೋಜಿಸಿದೆ.

ಒಂದು ದಿನದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕೆ ನೆರವಾಗುವ ಅಂಶಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಕೇಳಿ ತಿಳಿದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. 

ಮದರ್ ಇಂಡಿಯಾ ಕಾರ್ಯನಿರ್ವಾಹಕ ಅಧ್ಯಕ್ಷ ಪಿಯೂಷ್ ಪಾಂಡೆ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 11.30ಕ್ಕೆ ರೇಡಿಯೋ ಒನ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಸಿಂಗ್ ಹುಕ್‌ಮನಿ ಅವರು ಮೊದಲನೇ ಗೋಷ್ಠಿ ನಡೆಸಿಕೊಡಲಿದ್ದಾರೆ. 12.30ಕ್ಕೆ ಟೆಕ್ನಿಕಲರ್ ಇಂಡಿಯಾ ಮುಖ್ಯಸ್ಥ ಬಿರೆನ್ ಘೋಷ್ ಅವರಿಂದ ಗೋಷ್ಠಿ ಇರುತ್ತದೆ.

ಮಧ್ಯಾಹ್ನ 3ಕ್ಕೆ ಡಿಸೈನ್ ಅಂಡ್ ಅನಿಮೇಷನ್‌ನ ಹಿರಿಯ ಉಪಾಧ್ಯಕ್ಷ ಮನೀಶ್ ಮೋಹನ್ ಅವರು ಗೋಷ್ಠಿ ನಡೆಸಿಕೊಡಲಿದ್ದಾರೆ. ನಂತರ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 4ಕ್ಕೆ ಸಂವಾದ ಕಾರ್ಯಕ್ರಮವಿರುತ್ತದೆ. ನಂತರ ನಟ ಪ್ರಕಾಶ್ ರಾಜ್ ಅವರು ಗೋಷ್ಠಿ ನಡೆಸಿಕೊಡಲಿದ್ದಾರೆ. ಸಂಜೆ 6ಕ್ಕೆ ರಾಕ್ ಶೋ ಏರ್ಪಡಿಸಲಾಗಿದೆ.

ಸ್ಥಳ: ತೆಕ್ಲಾ ಆಡಿಟೋರಿಯಂ, ಬ್ರಂಟನ್ ರಸ್ತೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry