ಥ್ರೋಬಾಲ್ ಆಟಗಾರ ರವಿಕುಮಾರ್

7

ಥ್ರೋಬಾಲ್ ಆಟಗಾರ ರವಿಕುಮಾರ್

Published:
Updated:
ಥ್ರೋಬಾಲ್ ಆಟಗಾರ ರವಿಕುಮಾರ್

ಗ್ರಾಮೀಣ ಪ್ರದೇಶದಿಂದ ಬಂದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗುವುದು ಸದ್ಯದ ಪರಿಸ್ಥಿತಿಯಲ್ಲಿ ಸುಲಭದ ಮಾತಲ್ಲ. ಆದರೂ ಅದೇನೂ ಕಬ್ಬಿಣದ ಕಡಲೆ ಅಲ್ಲ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಥ್ರೋಬಾಲ್ ಆಟಗಾರ ರವಿಕುಮಾರ್ ತೋರಿಸಿಕೊಟ್ಟಿದ್ದಾರೆ.ತೃತೀಯ ಬಿ.ಕಾಂ. ವಿದ್ಯಾರ್ಥಿಯಾಗಿರುವ ರವಿಕುಮಾರ್ ಇತ್ತೀಚಿಗಷ್ಟೇ ಮಹಾರಾಷ್ಟ್ರದ ನಾಗಪುರ ಸಮೀಪದ ಅಕೋಲಾದಲ್ಲಿ ನಡೆದ ಅಂತರರಾಷ್ಟ್ರೀಯ ಸರಣಿ ಥ್ರೋಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಶ್ರೀಲಂಕಾ ತಂಡದ ಎದುರು ನಡೆದ ಆ ಸರಣಿ ಥ್ರೋಬಾಲ್ ಪಂದ್ಯಾಟವನ್ನು ಭಾರತ ತಂಡ ಗೆದ್ದಿತ್ತು.ಮೂಲತಃ ಚಿಕ್ಕಬಳ್ಳಾಪುರದವರಾದ ರವಿಕುಮಾರ್‌ಗೆ ಥ್ರೋಬಾಲ್‌ನಲ್ಲಿ ಆಸಕ್ತಿ ಮೂಡಿದ್ದು 6ನೇ ಕ್ಲಾಸ್‌ನಲ್ಲಿದ್ದಾಗ. ನಂತರ ಥ್ರೋಬಾಲ್ ಆಟ ಪ್ರಿಯವಾದಾಗ, ಹೆಚ್ಚಿನ ಒಲವು ತೋರಿಸಿದರು. ರವಿಕುಮಾರ್ ಆಟದಲ್ಲಿ ತೋರಿದ ಸಾಮರ್ಥ್ಯದಿಂದ ಎಂಟನೇ ತರಗತಿಯಲ್ಲಿ ಶಾಲಾ ತಂಡ ಪ್ರತಿನಿಧಿಸುವ ಅವಕಾಶವೂ ಸಿಕ್ಕಿತು.ರಾಷ್ಟ್ರ ಮಟ್ಟದಲ್ಲಿ: ಶಾಲಾ ತಂಡಕ್ಕೆ ಆಯ್ಕೆಯಾದ ಎರಡೇ ವರ್ಷದಲ್ಲಿ ರವಿಕುಮಾರ್ ಕರ್ನಾಟಕ ರಾಜ್ಯ ಥ್ರೋಬಾಲ್ ತಂಡವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರು. 10ನೇ ತರಗತಿಯಲ್ಲಿದ್ದಾಗ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದ ರಾಷ್ಟ್ರೀಯ ಕಿರಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಆಡಿದರು. ರಾಷ್ಟ್ರಮಟ್ಟದ ಪಂದ್ಯದಲ್ಲಿ ರನ್ನರ್ ಅಪ್ ಪ್ರಶಸ್ತಿ ಬಂತು. ಅಲ್ಲಿಂದ ರವಿಕುಮಾರ್ ಹಿಂದಿರುಗಿ ನೋಡಿದ್ದೇ ಇಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ರವಿಕುಮಾರ್‌ಗೆ ಕಿರಿಯರ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಒದಗಿ ಬಂತು. ನಾಗಪುರದಲ್ಲಿ ರಾಷ್ಟ್ರೀಯ ಜೂನಿಯರ್ ಪಂದ್ಯಾಟದಲ್ಲಿ ಅವರು ಆಡಿದರು. ನಂತರ ದಕ್ಷಿಣ ವಲಯ ತಂಡದಲ್ಲಿ ಆಡುವ ಅವಕಾಶವೂ ಬಂತು.ರಾಜ್ಯ ಪದವಿಪೂರ್ವ ಇಲಾಖೆಯ ತಂಡದಲ್ಲೂ ರವಿಕುಮಾರ್ ತಮ್ಮ ಅಸ್ತಿತ್ವ ತೋರಿಸಿದರು. ಪದವಿಪೂರ್ವ ಇಲಾಖೆ ತಂಡವನ್ನು ಪ್ರತಿನಿಧಿಸಿದ್ದಕ್ಕೆ ಕಂಚಿನ ಪದಕ ಬಂತು. 21 ವರ್ಷದೊಳಗಿನವರ ತಂಡಕ್ಕೂ ಕರೆ ಬಂತು. ಮತ್ತೆ ರಾಷ್ಟ್ರೀಯ ಮಟ್ಟದ ಸೀನಿಯರ್ ಥ್ರೋಬಾಲ್ ಪಂದ್ಯಾಟ ಚತ್ತೀಸ್‌ಗಢದಲ್ಲಿ ನಡೆದಾಗ ರವಿಕುಮಾರ್ ಕರ್ನಾಟಕ ತಂಡವನ್ನು ಪ್ರತಿನಿಧಿಸಿದರು.ಚತ್ತೀಸ್‌ಗಢದಲ್ಲಿ ನಡೆದ ಪಂದ್ಯಾಟದಲ್ಲಿ ಉತ್ತಮ ಥ್ರೋಬಾಲ್ ಆಟಗಾರರನ್ನು ಗುರುತಿಸಿ ಅವರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಲಾುತು. ಕರ್ನಾಟಕ ತಂಡದ ಇಬ್ಬರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಲ್ಲಿ ರವಿಕುಮಾರ್ ಕೂಡ ಒಬ್ಬರು. ರವಿಕುಮಾರ್ ಈಗ ಕೇವಲ  ಆಟಗಾರ ಮಾತ್ರವಲ್ಲ, ಥ್ರೋಬಾಲ್ ತರಬೇತಿ ಕೂಡ ನೀಡುತ್ತಿದ್ದಾರೆ. ಹಲವು ಶಾಲೆಗಳು ಈ ಅಂತರರಾಷ್ಟ್ರೀಯ ಥ್ರೋಬಾಲ್ ಆಟಗಾರನನ್ನು ತರಬೇತಿ ನೀಡಲು ಆಹ್ವಾನಿಸಿವೆ.ಪ್ರಸ್ತುತ ಉಜಿರೆ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟು ಆಗಿರುವ ರವಿಕುಮಾರ್ ಬೆಂಗಳೂರಿನ ಅಂತರರಾಷ್ಟ್ರೀಯ ತರಬೇತುದಾರ ಮೊಹಮ್ಮದ್ ಹಾಶಿಂ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ಕೋಚಿಂಗ್, ರಾಷ್ಟ್ರೀಯ, ಅಂತರ್ರ್ಟ್ರೋಯ ಥ್ರೋಬಾಲ್ ಪಂದ್ಯಾಟ ಎಂದು ಸದಾ ಬಿಡುವಿಲ್ಲದ ಕಾರ್ಯಕ್ರಮ ಹೊಂದಿದ್ದ ರವಿಕುಮಾರ್ ಶೈಕ್ಷಣಿಕ ಜೀವನದಲ್ಲೂ ಹಿಂದೆ ಬಿದ್ದಿಲ್ಲ. ಹೆಚ್ಚಿನ ಸಮಯವನ್ನು ಫೀಲ್ಡ್‌ನಲ್ಲಿ ಕಳೆದರೂ ಪ್ರಥಮ ದರ್ಜೆಯಲ್ಲಿ ಒಳ್ಳೆಯ ಅಂಕದೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಮುಂದೆ ಎಂಬಿಎ ಮಾಡುವ ಕನಸು ಹೊಂದಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry