ಥ್ರೋಬಾಲ್: ಕರ್ನಾಟಕ ತಂಡಕ್ಕೆ ಜೀವನ್ ನಾಯಕ

7

ಥ್ರೋಬಾಲ್: ಕರ್ನಾಟಕ ತಂಡಕ್ಕೆ ಜೀವನ್ ನಾಯಕ

Published:
Updated:

ಬೆಂಗಳೂರು: ನಂಜನಗೂಡಿನಲ್ಲಿ ಡಿಸೆಂಬರ್ 21ರಿಂದ 23ರ ವರೆಗೆ ನಡೆಯಲಿರುವ 21ನೇ ರಾಷ್ಟ್ರೀಯ ಸಬ್ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಬಾಲಕರ ತಂಡವನ್ನು ಆರ್. ಜೀವನ್ ಮುನ್ನಡೆಸಲಿದ್ದಾರೆ. ಬಾಲಕಿಯರ ತಂಡಕ್ಕೆ ನಿಶ್ಚಿತಾ ಎನ್. ಗೌಡ ನೇತೃತ್ವ ವಹಿಸಲಿದ್ದಾರೆ.ಕರ್ನಾಟಕ ಅಮೆಚೂರ್ ಥ್ರೋಬಾಲ್ ಸಂಸ್ಥೆ ಹಾಗೂ ಮೈಸೂರು ಜಿಲ್ಲಾ ಥ್ರೋ ಬಾಲ್ ಸಂಸ್ಥೆ ಜಂಟಿಯಾಗಿ ಈ ಚಾಂಪಿಯನ್‌ಷಿಪ್ ಆಯೋಜಿಸಿದೆ. ಪಂದ್ಯಗಳು ಸಿಟಿಜನ್ ಪ್ರೌಢಶಾಲೆಯಲ್ಲಿ ನಡೆಯಲಿವೆ. ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ 24 ರಾಜ್ಯಗಳ 700ಕ್ಕೂ ಅಧಿಕ ಆಟಗಾರರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಕರ್ನಾಟಕ ತಂಡಗಳು ಇಂತಿವೆ:

ಬಾಲಕರ ತಂಡ: ಜೀವನ್ ಆರ್. (ನಾಯಕ), ಹೇಮಂತ್ ಕುಮಾರ್, ನೂರ್ ಮಹಮ್ಮದ್, ನವೀನ್ ಕೆ.ಸಿ., ಶಾರೂಖ್ ಖಾನ್, ರಾಕೇಶ್ ಆರ್.ವಿ., ಶ್ರೀನಿವಾಸ್, ವಿ. ವಿನಿತ್ ಎಸ್., ನಾಗರಾಜ ಎ.ಸಿ., ವಿ. ಪವನ್ ಹಾಗೂ ಕಿರಣ್ ಕುಮಾರ್ ಕೆ.ಎಸ್., ನಿತ್ಯಾನಂದ (ಕೋಚ್), ರಾಕೇಶ್ (ಮ್ಯಾನೇಜರ್).ಬಾಲಕಿಯರ ತಂಡ: ನಿಶ್ಚಿತಾ ಎನ್. ಗೌಡ (ನಾಯಕಿ), ಅಕ್ಷತಾ ಎನ್.ಎಸ್., ಶ್ರೀಮುಖಿ, ಪ್ರಗತಿ ಬಿ.ವೈ., ಬಾನುಪ್ರಿಯಾ,  ಶ್ರಾವ್ಯಾ, ಛಾಯಾ, ರೂಪಾ ಎನ್., ಬಿಯಾಂತಾ ಹರಿ, ಪ್ರತಿಮಾ, ಚೈತನ್ಯ, ವಿಜಯಲಕ್ಷ್ಮಿ, ಕೆ.ಸಿ. ಚಿಕ್ಕನಾಯಿಕಾ (ಕೋಚ್) ಮತ್ತು ಶೋಭಾ ಕುಮಾರಿ (ಮ್ಯಾನೇಜರ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry