ಥ್ರೋಬಾಲ್: ಕರ್ನಾಟಕ ತಂಡಗಳ ಶುಭಾರಂಭ

7

ಥ್ರೋಬಾಲ್: ಕರ್ನಾಟಕ ತಂಡಗಳ ಶುಭಾರಂಭ

Published:
Updated:

ನಂಜನಗೂಡು: ಆತಿಥೇಯ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಶುಕ್ರವಾರ ಆರಂಭವಾದ 21ನೇ ರಾಷ್ಟ್ರೀಯ ಸಬ್ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದರು.ಪಟ್ಟಣದ ಸಿಟಿಜನ್ ಶಾಲೆ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಕರ್ನಾಟಕದ ಬಾಲಕರ ತಂಡ 25-09, 25-12ರಲ್ಲಿ ರಾಜಸ್ತಾನವನ್ನು ಮಣಿಸಿದರೆ, ಬಾಲಕಿಯರು 25-13, 25-11ರಲ್ಲಿ ಬಿಹಾರ್ ಎದುರು ಗೆಲುವು ಸಾಧಿಸಿದರು.ಮೂರು ದಿನಗಳ ಕಾಲ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಬಾಲಕ- ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 14 ಮತ್ತು 11 ತಂಡಗಳು ವಿವಿಧ ರಾಜ್ಯಗಳಿಂದ ಬಂದಿವೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಕರ್ನಾಟಕ ಅಮೆಚೂರ್ ಥ್ರೋಬಾಲ್ ಸಂಸ್ಥೆ, ಮೈಸೂರು ಜಿಲ್ಲಾ ಥ್ರೋಬಾಲ್ ಸಂಸ್ಥೆ ಮತ್ತು ನಂಜನಗೂಡಿನ ಸಿಟಿಜನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ಗಳ ಸಂಯುಕ್ತ ಆಶ್ರಯದಲ್ಲಿ ಈ ಚಾಂಪಿಯನ್‌ಷಿಪ್‌ೆ ಆಯೋಜನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry