ಬುಧವಾರ, ಏಪ್ರಿಲ್ 14, 2021
26 °C

ದಂಡರೂಪದ ಬಡ್ಡಿ ಮನ್ನಾ: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮಹಾನಗರ ಪಾಲಿಕೆ ಯಲ್ಲಿ ಬಾಕಿ ಇರುವ ಕರದ ಮೇಲಿನ ದಂಡರೂಪದ ಬಡ್ಡಿಯನ್ನು ಮನ್ನಾ ಮಾಡುತ್ತಿದ್ದು ನಾಗರಿಕರು ಇದರ ಸದುಯೋಗಪಡಿಸಿಕೊಳ್ಳಬೇಕು’ ಎಂದು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್  ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಾರ್ವಜನಿಕ ಪ್ರಕಟಣೆ ಹೊರಡಿಸಿದ ನಂತರ 3 ತಿಂಗಳೊಳಗಾಗಿ ಬಾಕಿ ಇರುವ ಅಸಲು ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವ ಸುಸ್ತಿದಾರ ಗ್ರಾಹಕರಿಗೆ ಬಾಕಿ ಇರುವ ದಂಡರೂಪದ ಬಡ್ಡಿ ಮೊತ್ತ ಪಾವತಿಸುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ.ಆರು ತಿಂಗಳೊಳಗಾಗಿ ಬಾಕಿ ಇರುವ ಮೊತ್ತವನ್ನು ಪೂರ್ಣ ಪಾವತಿಸುವ ಸುಸ್ತಿದಾರ ಗ್ರಾಹಕರಿಗೆ ಬಾಕಿ ಇರುವ ದಂಡರೂಪದ ಬಡ್ಡಿ  ಮೊತ್ತ ನೀಡುವುದರಿಂದ ಶೇಕಡ 50 ರಷ್ಟು ರಿಯಾಯಿ ನೀಡಲಾಗುತ್ತದೆ. 6 ತಿಂಗಳೊಳಗಾಗಿ ಬಾಕಿ ಇರುವ ಅಸಲು ಮತ್ತು ದಂಡರೂಪದ ಬಡ್ಡಿ ಮೊತ್ತವನ್ನು ಪಾವತಿ ಸಲು ವಿಫಲರಾಗುವ ಸುಸ್ತಿದಾರ ಗ್ರಾಹಕರಿಗೆ ಮತ್ತೊಮ್ಮೆ ಯಾವುದೇ ಸೂಚನೆ ನೀಡದೆ ನೀರು ಸರಬರಾಜು ಸಂಪರ್ಕವನ್ನು ಕಡಿತಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.‘ಎಲ್ಲ ಬಾಕಿದಾರರಿಗೆ ಸಹಾಯಕ ಆಯುಕ್ತರು ವಲಯ ಕಚೇರಿ ಮೂಲಕ ಅಸಲು ಬಡ್ಡಿಯನ್ನು ಪ್ರತ್ಯೇಕಿಸಿದ ತಿಳಿವಳಿಕೆ ಪತ್ರಗಳು ತಲುಪಿದ ಕೂಡಲೇ ಅದರಲ್ಲಿರುವ ಅಸಲು ಹಣವನ್ನು ಮಾತ್ರ ಒಂದೇ ಕಂತಿನಲ್ಲಿ (ಒಂದಾವರ್ತಿ ತೀರುವಳಿ) ಪಾವತಿಸಿ ಬಾಕಿ ಚುಕ್ತಾ ಮಾಡಿಕೊಳ್ಳಲು ಮತ್ತೊಮ್ಮೆ ಕೋರಲಾಗಿದೆ. ಒಂದು ವೇಳೆ ಈ ತಿಳಿವಳಿಕೆ ಪತ್ರಗಳು ಸಕಾಲದಲ್ಲಿ ಬಾಕಿದಾರರಿಗೆ ತಲುಪದಿ ್ದದಲ್ಲಿ ವಾಣಿವಿಲಾಸ ನೀರು ಸರಬರಾಜು ಕಾರ್ಯಾಲಯವನ್ನು ಖುದ್ದಾಗಿ ಸಂಪರ್ಕಿಸಿ ಅಸಲು ಮತ್ತು ಬಡ್ಡಿಯ ಮೊತ್ತದ ವಿವರವನ್ನು ಪಡೆದು ಬಾಕಿ ಚುಕ್ತಾ ಮಾಡಿ ಕೊಳ್ಳಬೇಕು’ ಎಂಬುದಾಗಿ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.