ದಂಡಾಧಿಕಾರಿಗಳ ಕಚೇರಿಯಲ್ಲಿ ಕಳ್ಳತನ

7

ದಂಡಾಧಿಕಾರಿಗಳ ಕಚೇರಿಯಲ್ಲಿ ಕಳ್ಳತನ

Published:
Updated:

ಹಾವೇರಿ: ಹಾನಗಲ್ ಶಹರ ಕಾರ್ಯನಿರ್ವಾಹಕ ದಂಡಾಧಿ ಕಾರಿಗಳ ಕಾರ್ಯಾಲಯದಲ್ಲಿ 20,000 ರೂ.ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿವೆ. ಕಾರ್ಯಾಲಯದ ಚಾರ್ಜ ಸೆಂಟರ್‌ನಲ್ಲಿದ್ದ ಗಣಕಯಂತ್ರದ ಒಂದು ಮಾನಿಟರ್, ಒಂದು ಸಿಪಿಯು ಕಳ್ಳತನವಾಗಿದೆ. ಈ ಬಗ್ಗೆ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ರಮೇಶ ಪಿ. ಕೋನರೆಡ್ಡಿ ಹಾನಗಲ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದಾರೆ.ಪಾದಚಾರಿ ಸಾವು: ಲಾರಿಯೊಂದು ಡಿಕ್ಕಿ ಹೊಡೆದ ಪರಿ ಣಾಮ ಪಾದಚಾರಿಯೊಬ್ಬ ಮೃತಪಟ್ಟ ಘಟನೆ  ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ. ರಾಣೆಬೆನ್ನೂರ ತಾಲ್ಲೂಕಿನ ಕೋಡಿಯಾಲ ಹೊಸಪೇಟೆಯ ಚಮನ್‌ಸಾಬ ಹುಸೇನ್‌ಸಾಬ ಶೇಕಸನದಿ (65) ಎನ್ನಲಾಗಿದೆ.  ಸೇತುವೆ ಮೇಲೆ ನಡೆದು ಕೊಂಡು ಹೋಗುತ್ತಿದ್ದಾಗ ಈ ದುರ್ಘನೆ ನಡೆದಿದೆ. ಕುಮಾರ ಪಟ್ಟಣಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry