ಬುಧವಾರ, ಅಕ್ಟೋಬರ್ 23, 2019
23 °C

ದಂತದ ಆಕರ ಕೋಶ: ಹೊಸ ಸಾಧ್ಯತೆ

Published:
Updated:

ಹೊಸ ಸಹಸ್ರಮಾನದದಲ್ಲಿ ಮುಂದುವರಿದ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನಗಳು ಸಾಂಪ್ರದಾಯಿಕ ವಿಜ್ಞಾನವನ್ನು ಬದಲಿಸಿವೆ. ನಾವು ವೈದ್ಯಕೀಯ ಸಮಸ್ಯೆಗಳಿಗೆ ಜೈವಿಕ ಪರಿಹಾರಗಳನ್ನು ಪರಿಶೋಧಿಸುತ್ತಿದ್ದೇವೆ.ನಿಮ್ಮ ಹಲ್ಲುಗಳು ಮುಂದೊಂದು ದಿನ ಮಧುಮೇಹ, ಬೆನ್ನುಹುರಿಯ ಗಾಯಗಳು, ಹೃದಯದ ಕಾಯಿಲೆ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ಚಿಕಿತ್ಸೆಗೆ ಬಳಕೆಯಾಗಬಹುದು. ಅಂತಹ ದಿನಗಳು  ತುಂಬಾ ದೂರ ಇಲ್ಲ. ಇದು ಕಾಲ್ಪನಿಕ ವಿಜ್ಞಾನ ಕಾದಂಬರಿಯ ಪುಟದ ಹಾಗೆ ಕಾಣುತ್ತದೆ. ಆದರೆ ದಂತದ ಆಕರ ಜೀವಕೋಶ ಥೆರಪಿಯ ಮೂಲಕ ಸಾಧ್ಯ.ಆಕರ ಕೋಶ ಎಂದರೇನು?

ಆಕರಕೋಶ ಒಂದು ಕೋಶವಾಗಿದ್ದು, ಜೀವಿಯ ಜೀವನಪರ್ಯಂತ ಅನಿರ್ದಿಷ್ಟ ಕಾಲ ವಿಭಜನೆಯಾಗುವ ಸಾಮರ್ಥ್ಯವನ್ನು (ಸ್ವಯಂ- ಪುನರಾವರ್ತನೆ) ಒಳಗೊಂಡಿದೆ. ಸೂಕ್ತ ಪರಿಸ್ಥಿತಿಗಳಲ್ಲಿ ಅಥವಾ ಸೂಕ್ತ ಸಂಕೇತಗಳನ್ನು ನೀಡಿದಾಗ ಆಕರಕೋಶಗಳು ಹಲವಾರು ಆಕರಕೋಶಗಳಾಗಿ ವಿಭಜನೆಯಾಗಬಲ್ಲುದು. ಈ ಆಕರಕೋಶಗಳು  ಹೃದಯದ ಜೀವ ಕೋಶಗಳು, ಚರ್ಮದ ಜೀವಕೋಶಗಳನ್ನು, ಅಥವಾ ನರಗಳ ಜೀವಕೋಶಗಳ ವಿಶೇಷ ಕಾರ್ಯಗಳನ್ನು ಮಾಡಬಲ್ಲ ಪ್ರಬುದ್ಧ ಜೀವಕೋಶಗಳಾಗಿ ಅಭಿವೃದ್ಧಿಯಾಗಬಲ್ಲುದು.ಆಕರಕೋಶಗಳ ಮೂಲಗಳು

ಆಕರ ಕೋಶಗಳನ್ನು ಮಾನವರ ಹಲವು ಅಂಗಗಳಲ್ಲಿ ಕಾಣಬಹುದು, ಅತಿ ಸಾಮಾನ್ಯವಾಗಿ ಕರೆಯಲ್ಪಡುವ ಆಕರಕೋಶಗಳ ಮೂಲಗಳು ಇಂತಿವೆ : ಮೂಳೆ ಮಜ್ಜೆ ಮತ್ತು ಹೊಕ್ಕುಳು ಬಳ್ಳಿ ( ಮಗುವಿನ ಜನನದ ನಂತರ ಬೇರ್ಪಡಿಸುವ). ಹೊಕ್ಕುಳುಬಳ್ಳಿಯ ಬ್ಯಾಂಕಿಂಗ್ ಇಂದಿನ ಕಾಲದಲ್ಲಿ ಸಾಮಾನ್ಯ ವಿದ್ಯಮಾನವಾಗಿದೆ. ಬಹುತೇಕ ಜನರು, ಹಲ್ಲುಗಳಲ್ಲಿ ಕೂಡ (ದಂತದ ತಿರುಳು)ಆಕರಕೋಶಗಳು ಇರುತ್ತವೆ ಎಂಬುದನ್ನು ಕೇಳಿದ ಉದಾಹರಣೆ ಇಲ್ಲ. ಮುಖ್ಯವಾಗಿ, ದಂತದ ಆಕರಕೋಶಗಳನ್ನು  ಭವಿಷ್ಯದ ವೈದ್ಯಕೀಯ ಚಿಕಿತ್ಸೆಯ ಬಳಕೆಗೆ ಉಪಯೋಗ ಮಾಡಬಹುದು.

 

ಇತ್ತೀಚಿನ ವೈದ್ಯಕೀಯ ತಂತ್ರಜ್ಞಾನಗಳ ಮೂಲಕ ಈ ಆಕರಕೋಶಗಳನ್ನು ಸಂರಕ್ಷಿಸಲು / ವಾಸ್ತವವಾಗಿ ಈ ಜೀವಕೋಶಗಳ ಬ್ಯಾಂಕಿಗೆ ಸಹ ಸಾಧ್ಯತೆ ಇದೆ. ಈ ಸೌಲಭ್ಯ ಭಾರತದಲ್ಲಿ ಈಗಾಗಲೇ ಲಭ್ಯವಿದೆ. ನಿರ್ದಿಷ್ಟವಾಗಿ, ದಂತದ ಆಕರಕೋಶಗಳು ಇಲ್ಲಿ ಕಂಡುಬರುತ್ತವೆ.ಶಿಶುವಿನ ಹಲ್ಲುಗಳು ಅಥವಾ ಹಾಲು ಹಲ್ಲುಗಳು (ವಿಶೇಷವಾಗಿ ಮುಂದಿನ ಹಲ್ಲು): ಮಕ್ಕಳಲ್ಲಿರುವ, ಬೆಳೆಯುವ ಹಂತದಲ್ಲಿ ಉದುರಿ ಹೋಗುವ ಹಲ್ಲುಗಳ ತಿರುಳು ಕಾಂಡಕೋಶಗಳನ್ನು ಹೊಂದಿರುತ್ತದೆ. ಈ ಹಲ್ಲುಗಳು ಸಾಮಾನ್ಯವಾಗಿ ಐದನೇ ವಯಸ್ಸಿನಿಂದ ಬಿದ್ದು ಹೋಗಲು ಆರಂಭವಾಗಿ ಹನ್ನೆರಡನೇ ವಯಸ್ಸಿನ ತನಕ ಬಿದ್ದು ಹೋಗುತ್ತವೆ.ವಿಸ್ಡಮ್ ಹಲ್ಲು (ದವಡೆಯ ಮೂರನೆಯ ಹಲ್ಲು): ಈ ವಿಸ್ಡಮ್ ಹಲ್ಲುಗಳು ಶಾಶ್ವತವಾಗಿ ಉಳಿಯುವ ವಯಸ್ಕ ಹಲ್ಲುಗಳು. ಇದರ ತಿರುಳು ಕೂಡ ಕಾಂಡಕೋಶಗಳನ್ನು ಹೊಂದಿರುತ್ತದೆ. ಈ  ಹಲ್ಲು ಸಾಮಾನ್ಯವಾಗಿ ಜಗಿಯುವ ಕಾರ್ಯದಲ್ಲಿ ಭಾಗವಹಿಸುವುದಿಲ್ಲ. ಅಲ್ಲದೆ, ಅದರ ಅಸಹಜ ಸ್ಥಾನ ಇದಕ್ಕೆ ಕಾರಣ, ಅದನ್ನು ತೊಳೆಯಲು ಕೂಡ ಕಷ್ಟಕರವಾಗುತ್ತದೆ. ಅದರ ಸುತ್ತುಮುತ್ತಲಿನ ಪ್ರದೇಶದ ಆರೋಗ್ಯ ಕಾಪಾಡುವುದು ಕಷ್ಟಕರವಾದ್ದರಿಂದ ಅದನ್ನು ತೆಗೆಯುವುದು ಸಾಮಾನ್ಯ.ಪ್ರಿಮೊಲಾರಸ್ ಮತ್ತು ಇತರ ಶಾಶ್ವತ ಹಲ್ಲುಗಳು (ದಂತಯೋಜಕ ಚಿಕಿತ್ಸೆ): ಹದಿಹರೆಯದವರಿಗೆ ಸಾಮಾನ್ಯವಾಗಿ ಸುದಂತಯೋಜಕ ಚಿಕಿತ್ಸೆಗಾಗಿ  “ ಪಟ್ಟಿಗಳ ಕಟ್ಟುವಿಕೆಯ ಚಿಕಿತ್ಸೆ“ ಮಾಡುವ ವೇಳೆಯಲ್ಲಿ ಗಟ್ಟಿಮುಟ್ಟಾದ ಹಲ್ಲುಗಳನ್ನು ತೆಗೆಯುವುದು ಅಗತ್ಯ. ಇದಲ್ಲದೆ  ಶಾಶ್ವತವಾದ ಕೋರೆಹಲ್ಲುಗಳು, ದವಡೆ ಹಲ್ಲಿನ ಅಥವಾ ಬಾಚಿಹಲ್ಲನ್ನು ಸಹ ಅದೇ ಉದ್ದೇಶಕ್ಕಾಗಿ ತೆಗೆದುಹಾಕಬಹುದು. ವೈದ್ಯಕೀಯ ಕಾರಣಗಳಿಗಾಗಿ ತೆಗೆದು ಹಾಕುವ ಈ ಹಲ್ಲುಗಳನ್ನು ಸುಲಭವಾಗಿ ಸಂಗ್ರಹಿಸಿ ಆಕರಕೋಶಗಳ ಮೂಲವಾಗಿಸಬಹುದು.ದಂತದ ತಿರುಳಿನಲ್ಲಿರುವ ಆಕರಕೋಶಗಳು

ದಂತದ ತಿರುಳು ಹಲ್ಲಿನ ಒಳಗಿರುವ ಮೃದು ಅಂಗಾಂಶ ಆಗಿದೆ. ಈ ದಂತದ ತಿರುಳು ಆಕರಕೋಶಗಳನ್ನು ಹೊಂದಿದೆ.  ಉತ್ತಮ ದಂತ ತಿರುಳು ಆಕರಕೋಶಗಳು  (ವಿಶೇಷವಾಗಿ ಮುಂಭಾಗದ ಹಲ್ಲುಗಳು) ಬೇಬಿ ಹಲ್ಲುಗಳು ಅಥವಾ ಹಾಲು ಹಲ್ಲುಗಳಲ್ಲಿ ಇರುತ್ತವೆ. ಹಾಲು ಹಲ್ಲುಗಳಲ್ಲಿ ಹುಟ್ಟಿಕೊಳ್ಳುವ ಆಕರಕೋಶಗಳು ಕಾರ್ಟಿಲೆಜ್ ಕೋಶಗಳು, ಮೂಳೆ ಕೋಶಗಳು, ಕೊಬ್ಬು ಜೀವಕೋಶಗಳು ಇತ್ಯಾದಿ ಅಂಗಾಂಶ ರೂಪಿಸುವ ಜೀವಕೋಶ ಪ್ರಕಾರಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.ಪ್ರಾಥಮಿಕ ಹಲ್ಲುಗಳ ತಿರುಳು

ಪ್ರಾಥಮಿಕ ಹಲ್ಲುಗಳ ತಿರುಳು ಗರ್ಭದಲ್ಲಿ 6 ನೇ ವಾರದಲ್ಲಿ ತನ್ನ ರಚನೆಯನ್ನು ಆರಂಭಿಸುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ದಂತ ತಿರುಳು ಕೋಶಗಳು ವಿವಿಧ ರೀತಿಯಲ್ಲಿ ಬೇರ್ಪಡುವ ಸಾಮರ್ಥ್ಯವನ್ನು ಹೊಂದಿವೆ.ಇದು ಹಲ್ಲುಗಳ ದುರಸ್ತಿಗೆ ಸಹಕರಿಸುತ್ತವೆ. ಸವೆಯುವಿಕೆ ಅಥವಾ ಕೋಶಗಳಿಗೆ ಹಾನಿಯಾದಾಗ ಸಹಕರಿಸುತ್ತವೆ.ಭವಿಷ್ಯದ ದಂತ ವೈದ್ಯಕೀಯ

ವೈಜ್ಞಾನಿಕ ವರದಿಗಳ ಪ್ರಕಾರ ಮಕ್ಕಳು ಬಹುಶಃ ರೂಟ್ ಕೆನಾಲ್ ಚಿಕಿತ್ಸೆಗೆ ವಿದಾಯ ಹೇಳುವ ದಿನಗಳು ಇದು. ಯಾಕೆಂದರೆ ಉತ್ತಮ ಆಕರಕೋಶಗಳು.  ಹೊಸ ಕಡಿಮೆ-ಆಕ್ರಮಣಕಾರಿ ಚಿಕಿತ್ಸೆಯ ಮೂಲಕ ಎಳೆಯರ ಆಕರಕೋಶಗಳಿಗೆ ಹಾನಿಯಾಗದಂತೆ ಸಂರಕ್ಷಿಸಬಹುದು. ಹಲವಾರು ಪ್ರಯೋಗಗಳನ್ನು ಮಾಡಿದ ನಂತರ, ವಿಜ್ಞಾನಿಗಳು ಮಹತ್ವದ ನೈಸರ್ಗಿಕ ಪುನರುತ್ಪಾದಕ ಅಂಗಾಂಶ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡಿದ್ದಾರೆ. ಕೃತಕ  ವಸ್ತುಗಳನ್ನು ಬಳಸಿ ತುಂಬುವುದರ ಬದಲಿಗೆ ನೈಸರ್ಗಿಕವಾಗಿ ಪುನರುತ್ಪಾದನೆಯಾಗುವ ಅಂಗಾಂಶ ಪ್ರಕ್ರಿಯೆ ಉತ್ತಮ ಎಂಬ ತೀರ್ಮಾನವನ್ನು ತಳೆದಿದ್ದಾರೆ.  ಪ್ರೌಢವಲ್ಲದ ವಯಸ್ಕ ಹಲ್ಲುಗಳ ಚಿಕಿತ್ಸಾ ವಿಧಾನಗಳಿಗೆ ಈ ರೀತಿಯ ಚಿಕಿತ್ಸಾ ವಿಧಾನ ಸೂಕ್ತವಾಗಬಹುದು.ಭವಿಷ್ಯದ ದಿನಗಳಲ್ಲಿ: ವಿಜ್ಞಾನಿಗಳು ಈಗ ಹಲ್ಲುಗಳ ಆಕರ ಕೋಶಗಳ ಕುರಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ದೇಹದಲ್ಲಿನ ಮಾಸ್ಟರ್ ಕೋಶಗಳು ಎಂದು ಕರೆಯಲ್ಪಡುವ ಆಕರಕೋಶಗಳನ್ನು ಒಳಗೊಂಡ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇಲ್ಲಿ ಜೀವಕೋಶಗಳನ್ನು ಸಣ್ಣ ಕೋಶಗಳ ಚೆಂಡಾಗಿ ವಿಭಜಿಸಿ  ನಂತರ ಬೆಳೆಸಲಾಗುತ್ತದೆ. ರೋಗಿಯ ದವಡೆಯ ಹಲ್ಲಿನ ಮೊಗ್ಗಿಗೆ ಕಸಿ ಮಾಡಲಾಗುತ್ತದೆ. ಮಾನವನ ಹಲ್ಲುಗಳ ಬೆಳವಣಿಗೆಯ ರೀತಿಯಲ್ಲಿ ಬೆಳೆಸಲಾಗುತ್ತದೆ.  ಇದರಲ್ಲಿ ವಿಜ್ಞಾನಿಗಳು ಸಫಲರಾಗಿದ್ದಾರೆ.  ಇಂತಹ ಹೊಸ ಹಲ್ಲನ್ನು ಸಂಪೂರ್ಣವಾಗಿ ರೂಪಿಸಲು ಸುಮಾರು ಎರಡು ತಿಂಗಳು ಹಿಡಿಯುತ್ತದೆ. ಈ ಪ್ರಕ್ರಿಯೆ ಮಾನವ ಹಲ್ಲುಗಳ ಬೆಳವಣಿಗೆಗೆ ಹೋಲುತ್ತದೆ. ವಿಜ್ಞಾನಿಗಳು ಈಗಾಗಲೇ ಇಲಿಗಳ ಮೇಲೆ ಯಶಸ್ವೀ ಫಲಿತಾಂಶಗಳನ್ನು ಕಂಡಿದ್ದಾರೆ.  ಭವಿಷ್ಯದಲ್ಲಿ ರೋಗಿಗಳ ಮೇಲೆ ಪರೀಕ್ಷೆ ಮತ್ತು ಸಾರ್ವಜನಿಕರಿಗೆ ವ್ಯಾಪಕವಾಗಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.ಈಗ ನಡೆಯುತ್ತಿರುವ ಸಂಶೋಧನೆಯಿಂದ  ಮಕ್ಕಳು ಬೇಗ ಭೀತಿಗೊಳಿಸುವ ದಂತ ಚಿಕಿತ್ಸೆಗೆ ವಿದಾಯ  ಹೇಳಲು ಸಾಧ್ಯವಾಗುವ ನಿರೀಕ್ಷೆ ಇದೆ.(ಲೇಖಕರು ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಡೆಂಟಿಸ್ಟ್, ಬೆಂಗಳೂರು, ಸ್ಟೆಮೇಡ್ ಬಯೋಟೆಕ್- ಏಷ್ಯಾದಲ್ಲಿ ಮುಂಚೂಣಿಯಲ್ಲಿರುವ  ಡೆಂಟಲ್ ಸ್ಟೆಮ್ ಸೆಲ್ ಬ್ಯಾಂಕಿಂಗ್ ಸಂಸ್ಥೆ )

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)