ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ವಿಜಯ

7

ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ವಿಜಯ

Published:
Updated:

ನವದೆಹಲಿ: ದಕ್ಷಿಣ ಆಫ್ರಿಕಾದ ವನಿತೆಯರು ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಎರಡನೇ ಜಯ ದಾಖಲಿಸಿದರು.

ಭಾನುವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಮರೇಸಿಯಾ ಮಾರ್ಷಾ ನೇತೃತ್ವದ ದಕ್ಷಿಣ ಆಫ್ರಿಕಾ 2-0ಯಿಂದ ಉಕ್ರೇನ್ ವಿರುದ್ಧ ಜಯಿಸಿತು.

ಪಂದ್ಯದ 20ನೇ ನಿಮಿಷದಲ್ಲಿ ಪೈಟಿ ಕೋಝಿ ಮತ್ತು 29ನೇ ನಿಮಿಷದಲ್ಲಿ ಕಿಂಬರ‌್ಲಿನ್ ಡಿರ್ಕಿ ಗಳಿಸಿದ           ಫೀಲ್ಡ್‌ಗೋಲುಗಳ ನೆರವಿನಿಂದ ದಕ್ಷಿಣ ಆಫ್ರಿಕಾ ಗೆದ್ದಿತು.

ಶನಿವಾರ ಆಫ್ರಿಕಾ ತಂಡವು ಪೊಲೆಂಡ್ ತಂಡದ ವಿರುದ್ಧ ಜಯಿಸಿತ್ತು. ಉಕ್ರೇನ್ ಭಾರತ ದೊಂದಿಗಿನ ಪಂದ್ಯ ಡ್ರಾ ಆಗಿತ್ತು.

ಇಟಲಿಗೆ ಗೆಲುವು: ಪಡಾಲಿನಾ ಅಲೆಸಿಯಾ ಡೊರಿಯಾನಾ `ಹ್ಯಾಟ್ರಿಕ್~ ಸಾಧನೆಯ ನೆರವಿನಿಂದ ಇಟಲಿ ತಂಡವು 4-1ರಿಂದ ಪೊಲೆಂಡ್ ವಿರುದ್ಧ ಜಯಿಸಿತು.

ಬೆಳಿಗ್ಗೆ ನಡೆದ ಪದ್ಯದಲ್ಲಿ ಪ್ರಥಮಾರ್ಧದಲ್ಲಿ ಎರಡೂ ತಂಡಗಳು ಒಂದೂ ಗೋಲು ದಾಖಲಿಸಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ವಿಜೃಂಭಿ ಸಿದ ಡಿಫೆಂಡರ್ ಡೊರಿಯಾನಾ (43ನಿ, 48ನಿ ಮತ್ತು 65ನಿ) ಮೂರು ಗೋಲು ಗಳಿಸಿದರು. ಇದಕ್ಕೂ ಮುನ್ನ ರಗ್ಗೀರಿ ಗ್ವಿಲ್ಲಾನ್ (41ನಿ) ಒಂದು ಗೋಲು ಹೊಡೆದರು. ಪೊಲೆಂಡ್ ಪರವಾಗಿ 49ನೇ ನಿಮಿಷದಲ್ಲಿ ಅನ್ನಾ ಗ್ರಜಾಂಕಾ ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry