ಭಾನುವಾರ, ಆಗಸ್ಟ್ 25, 2019
27 °C
ಕ್ರಿಕೆಟ್: ಸಂಗಕ್ಕಾರ ಹೋರಾಟಕ್ಕೆ ಲಭಿಸದ ಫಲ

ದಕ್ಷಿಣ ಆಫ್ರಿಕಾ ಜಯಕ್ಕೆ ಡುಮಿನಿ ಬಲ

Published:
Updated:

ಕೊಲಂಬೊ: ಜೇನ್ ಪಾಲ್ ಡುಮಿನಿ ಅವರ ಆಲ್‌ರೌಂಡ್ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ಎದುರಿನ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 12 ರನ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಆಫ್ರಿಕಾ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ತನ್ನದಾಗಿಸಿಕೊಂಡಿತು.ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು. ಆದರೆ, ಈ ಸಾಧಾರಣ ಮೊತ್ತವೇ ಆತಿಥೇಯರಿಗೆ ಭಾರಿ ಸವಾಲು ಎನಿಸಿತು. ಲಂಕಾ ನಿಗದಿತ ಓವರ್‌ಗಳು ಅಂತ್ಯ ಕಂಡಾಗ 9 ವಿಕೆಟ್ ನಷ್ಟಕ್ಕೆ 103 ರನ್ ಮಾತ್ರ ಕಲೆ ಹಾಕಿತು.ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್ ವಿಫಲರಾದರು. ಡುಮಿನಿ (51, 52ಎಸೆತ, 3ಬೌಂಡರಿ, 1 ಸಿಕ್ಸರ್) ಬ್ಯಾಟಿಂಗ್‌ನಲ್ಲಿ ಮಿಂಚಿದರಲ್ಲದೇ ಮೂರು ವಿಕೆಟ್ ಕಬಳಿಸಿದರು. ಲಂಕಾದ ಕುಮಾರ ಸಂಗಕ್ಕಾರ (ಔಟಾಗದೆ 59, 53ಎಸೆತ, 9ಬೌಂಡರಿ) ನಡೆಸಿದ ಹೋರಾಟಕ್ಕೆ ಫಲ ಲಭಿಸಲಿಲ್ಲ.ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 115. (ಜೇನ್ ಪಾಲ್ ಡುಮಿನಿ 51, ಎ.ಬಿ. ಡಿವಿಲಿಯರ್ಸ್ 15, ಡೇವಿಡ್ ಮಿಲ್ಲರ್ 25; ಲಸಿತ್ ಮಾಲಿಂಗ 25ಕ್ಕೆ1, ಸಚಿತ್ರಾ ಸೇನಾನಾಯಕೆ 14ಕ್ಕೆ3, ಅಜಂತಾ ಮೆಂಡೀಸ್ 32ಕ್ಕೆ1).ಶ್ರೀಲಂಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 103. (ಕುಶಾಲ್ ಪೆರೇರಾ 11, ಕುಮಾರ ಸಂಗಕ್ಕಾರ ಔಟಾಗದೆ 59, ಲಾಹಿರಿ ತಿರಿಮನ್ನೆ 5; ಮಾರ್ನೆ ಮಾರ್ಕೆಲ್ 28ಕ್ಕೆ2, ವೇಯ್ನ ಪಾರ್ನೆಲ್ 8ಕ್ಕೆ2, ಜೇನ್ ಪಾಲ್ ಡುಮಿನಿ 18ಕ್ಕೆ3).ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 12 ಜಯ. ಪಂದ್ಯ ಶ್ರೇಷ್ಠ: ಡುಮಿನಿ

Post Comments (+)