ಶನಿವಾರ, ಮೇ 8, 2021
25 °C
ಹಾಶೀಮ್ ಆಮ್ಲಾ ಉತ್ತಮ ಆಟ; ಪಾಕ್‌ಗೆ ನಿರಾಸೆ

ದಕ್ಷಿಣ ಆಫ್ರಿಕಾ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್ ಹ್ಯಾಂ (ಪಿಟಿಐ): ಹಾಶಿಮ್ ಆಮ್ಲಾ (81, 97ಎಸೆತ, 9ಬೌಂಡರಿ) ಅವರ ಜವಾಬ್ದಾರಿಯುತ ಆಟ ಹಾಗೂ ಎಲ್ಲ ಬೌಲರ್‌ಗಳ ಪ್ರಭಾವಿ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 67 ರನ್‌ಗಳ ಗೆಲುವು ಪಡೆಯಿತು.ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 234 ರನ್‌ಗಳನ್ನು ಕಲೆ ಹಾಕಿದರೆ, ಪಾಕ್ ತಂಡ 45 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟಾಯಿತು.ಟಾಸ್ ಗೆದ್ದ ಎ.ಬಿ. ಡಿವಿಲಿಯರ್ಸ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಲಭಿಸಿತ್ತು. ಕಾಲಿನ್ ಇನ್‌ಗ್ರಾಮ್ (20, 45ಎಸೆತ, 2ಬೌಂಡರಿ) ಮತ್ತು ಆಮ್ಲಾ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 53 ರನ್‌ಗಳನ್ನು ಗಳಿಸಿತು.ಆಮ್ಲಾ ಜೊತೆಗೂಡಿದ ಪ್ಲೆಸ್ಸಿಸ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 69 ರನ್‌ಗಳನ್ನು ಕಲೆ ಹಾಕಿ ತಂಡದ ರನ್ ವೇಗ ಹೆಚ್ಚಿಸಿದರು.ಪಾಕ್ ತಂಡದ ಬೌಲರ್‌ಗಳು ಬೇಗನೇ ವಿಕೆಟ್ ಪಡೆಯಲಿಲ್ಲವಾದರೂ, ಎದುರಾಳಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸದಂತೆ ಎಚ್ಚರಿಕೆ ವಹಿಸಿದರು.ಫಾಫ್ ಡು ಪ್ಲೆಸ್ಸಿಸ್ (28, 40ಎಸೆತ, 2 ಬೌಂಡರಿ), ನಾಯಕ ಎ.ಬಿ. ಡಿವಿಲಿಯರ್ಸ್ (31) ಹಾಗೂ ಜೀನ್ ಪಾಲ್ ಡುಮಿನಿ (24) ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಆದರೆ ಆಮ್ಲಾ ತಂಡದ ನೆರವಿಗೆ ನಿಂತರು.ಸಾಧಾರಣ ಗುರಿ ಬೆನ್ನಟ್ಟಿದ ಪಾಕ್ ಬ್ಯಾಟ್ಸ್‌ಮನ್‌ಗಳು ಎದುರಾಳಿ ತಂಡದ ಶಿಸ್ತಿನ ಬೌಲಿಂಗ್ ಮುಂದೆ ಪರದಾಟ ನಡೆಸಿದರು. ನಾಯಕ ಮಿಸ್ಬಾ ಉಲ್ ಹಕ್ (55, 75 ಎಸೆತ) ಮತ್ತು ನಾಸಿರ್ ಜಮ್‌ಶೆದ್ (42) ಮಾತ್ರ ಅಲ್ಪ ಹೋರಾಟ ತೋರಿದರು. 19 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದ ರ‌್ಯಾನ್ ಮೆಕ್‌ಲಾರೆನ್ ಪಾಕ್ ತಂಡದ ಪತನಕ್ಕೆ ಕಾರಣರಾದರು.ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 234 (ಕಾಲಿನ್ ಇನ್‌ಗ್ರಾಮ್ 20, ಹಾಶಿಮ್ ಆಮ್ಲಾ 81, ಪ್ಲಾಫ್ ಡು ಪ್ಲೆಸ್ಸಿಸ್ 28, ಎ.ಬಿ. ಡಿವಿಲಿಯರ್ಸ್ 31, ಜೀನ್ ಪಾಲ್ ಡುಮಿನಿ 24, ಡೇವಿಡ್ ಮಿಲ್ಲರ್ 19, ರಾಬಿನ್ ಪೀಟರ್ಸನ್ ಔಟಾಗದೆ 16; ಮಹಮ್ಮದ್ ಇರ್ಫಾನ್ 27ಕ್ಕೆ1, ಜುನೈದ್ ಖಾನ್ 45ಕ್ಕೆ1, ಮಹಮ್ಮದ್ ಹಫೀಜ್ 38ಕ್ಕೆ1, ಸಯೀದ್ ಅಜ್ಮಲ್ 42ಕ್ಕೆ1, ಶೋಯಬ್ ಮಲೀಕ್ 27ಕ್ಕೆ1) ಪಾಕಿಸ್ತಾನ: 45 ಓವರ್‌ಗಳಲ್ಲಿ 167 (ನಾಸಿರ್ ಜಮ್‌ಶೆದ್ 42, ಮಿಸ್ಬಾ ಉಲ್ ಹಕ್ 55, ರ‌್ಯಾನ್ ಮೆಕ್‌ಲಾರೆನ್ 19ಕ್ಕೆ 4, ಲೊನ್ವಾಬೊ ಸೊಸೊಬೆ 23ಕ್ಕೆ 2, ಕ್ರಿಸ್ ಮಾರಿಸ್ 25ಕ್ಕೆ 2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 67 ರನ್ ಗೆಲುವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.