ಭಾನುವಾರ, ಮೇ 22, 2022
24 °C

ದಕ್ಷಿಣ ಆಫ್ರಿಕಾ ಫೇವರಿಟ್ ಅಲ್ಲ: ಫ್ಲೆಚರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದಕ್ಷಿಣ ಆಫ್ರಿಕಾ ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಲ್ಲ’.ಈ ಮಾತು ಹೇಳಿದ್ದು ದಕ್ಷಿಣ ಆಫ್ರಿಕಾ ತಂಡದ ಸಲಹೆಗಾರ ಡಂಕನ್ ಫ್ಲೆಚರ್!‘ನನ್ನ ಪ್ರಕಾರ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲುವ ಫೇವರಿಟ್ ಅಲ್ಲ. ಬದಲಾಗಿ ಭಾರತ ನೆಚ್ಚಿನ ತಂಡ. ಶ್ರೀಲಂಕಾ ತಂಡವನ್ನು ಕೂಡ ಈ ಸಾಲಿನಲ್ಲಿ ಇಡಲು ಬಯಸುತ್ತೇನೆ. ಏಕೆಂದರೆ ಅವರು ಸ್ವದೇಶದಲ್ಲಿ ಆಡುತ್ತಿದ್ದಾರೆ’ ಎಂದಿದ್ದಾರೆ.‘ನಾನು ಬ್ಯಾಟಿಂಗ್ ಕೋಚ್ ಆಗಿ ತಂಡದಲ್ಲಿದ್ದೇನೆ. ತಂಡಕ್ಕೆ ನನ್ನ ಅನುಭವವನ್ನು ಧಾರೆ ಎರೆಯುತ್ತಿದ್ದೇನೆ’ ಎಂದು ಅವರು ಶುಕ್ರವಾರ ದಕ್ಷಿಣ ಆಫ್ರಿಕಾ ತಂಡದ ಅಭ್ಯಾಸದ ಬಳಿಕ ನುಡಿದರು.‘ಗ್ರೇಮ್ ಸ್ಮಿತ್ ಪಡೆ ಸಮತೋಲನ ದಿಂದ ಕೂಡಿದೆ. ಆದರೆ ಬಲಿಷ್ಠ ಆಟಗಾರರ ಕೊರತೆ ಇದೆ. ಜೊತೆಗೆ ಇದು ಅನನುಭವಿಗಳ ತಂಡ’ ಎಂದು ಅವರು ಹೇಳಿದ್ದಾರೆ.

ಆಲ್‌ರೌಂಡರ್ ಜಾಕ್ ಕಾಲಿಸ್ ಹಾಗೂ ಹಾಶೀಮ್ ಆಮ್ಲಾ ಅವರ ಬಗ್ಗೆ ಜಿಂಬಾಬ್ವೆ ತಂಡದ ಮಾಜಿ ನಾಯಕ ಮೆಚ್ಚುಗೆ ಮಾತನಾಡಿದರು.‘ಆಮ್ಲಾ ವಿಶ್ವದರ್ಜೆಯ ಆಟಗಾರ. ಆರಂಭದಲ್ಲಿ ಅವರ ಶೈಲಿ ಟೆಸ್ಟ್‌ಗೆ ಮಾತ್ರ ಸೂಕ್ತ ಎನ್ನುವಂತಿತ್ತು. ಆದರೆ ಕ್ರಮೇಣ ಅತ್ಯುತ್ತಮ ಏಕದಿನ ಕ್ರಿಕೆಟ್ ಆಟಗಾರರಾಗಿ ಕೂಡ ರೂಪುಗೊಂಡಿದ್ದಾರೆ. ಪವರ್ ಪ್ಲೇನ ವೇಳೆ ಆರಂಭದಲ್ಲಿ ಅತ್ಯುತ್ತಮ ಇನಿಂಗ್ಸ್ ಕಟ್ಟುತ್ತಾರೆ. ಫೀಲ್ಡಿಂಗ್ ಕೂಡ ಚೆನ್ನಾಗಿದೆ.ಅವರು ಶಾಂತಚಿತ್ತದ ಆಟಗಾರ. ಕಾಲಿಸ್ ಒಬ್ಬ ತಾಂತ್ರಿಕವಾಗಿ ನಿಪುಣ ಆಟಗಾರ. ಟ್ವೆಂಟಿ-20 ಸೇರಿದಂತೆ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಅಮೋಘ ಇನಿಂಗ್ಸ್ ಕಟ್ಟುತ್ತಾರೆ’ ಎಂದು ಫ್ಲೆಚರ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.