ಭಾನುವಾರ, ಡಿಸೆಂಬರ್ 15, 2019
26 °C
ರಾಜ್ಯ ಮಟ್ಟದ ಅಥ್ಲೆಟಿಕ್ಸ್

ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ

ಕೆ.ಆರ್.ನಗರ: ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಸೆಪ್ಟಂಬರ್ 1ರಿಂದ 3ರವರೆಗೆ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ಓಟ, ಹರ್ಡಲ್ಸ್, ರಿಲೇ, ನಡಿಗೆ, ಗುಂಡು ಎಸೆತ, ಜಾವಲಿನ್ ಎಸೆತ, ಚಕ್ರ ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ಮೂರು ದಿನಗಳ ಕಾಲ ನಡೆದವು. ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಿಕೊಂಡಿತ್ತು.ವಿಧಾನ ಪರಿಷತ್ ಸದಸ್ಯ ಗೋ. ಮಧುಸೂಧನ್ ಭಾನುವಾರ ಕ್ರೀಡಾಕೂಟ ಉದ್ಘಾಟಿಸಿದರು. ಯಾವುದೇ ಕ್ರೀಡೆಗಳಲ್ಲಿ ಗೆಲುವಿಗಿಂತ, ಭಾಗವಹಿಸು ವುದು ಮುಖ್ಯ ಎಂದರು.ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಮಧ್ಯ ಕ್ಷೇತ್ರದ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ , ಅಧ್ಯಕ್ಷ ಎಚ್.ಆರ್. ರಾಮಾನುಜಶೆಟ್ಟಿ, ಕ್ರಿಕೆಟ್ ತರಬೇತುದಾರ ಕೆ.ಎಂ. ವಿಶ್ವನಾಥ್, ಡಾ.ದೇವಪಾಲ್, ರಘುವೀರ್, ಡಾ.ಎಲ್. ಅಮರ್‌ನಾಥ್, ಪ್ರಭಾಕರ್ ಜೈನ್, ಪಿ.ಆರ್. ವಿಶ್ವನಾಥ್‌ಶೆಟ್ಟಿ, ಉಮಾಕಾಂತ್, ದೈಹಿಕ ಶಿಕ್ಷಣ ಶಿಕ್ಷಕ ಅನಂತರಾಜ್, ಕಾಂತರಾಜ್ ಇದ್ದರು.ವಿದ್ಯಾಭಾರತಿ ಕರ್ನಾಟಕ ಸಂಸ್ಥೆ ಆಶ್ರಯದಲ್ಲಿ ನಡೆದ ಮೂರು ದಿನಗಳ ಕ್ರೀಡಾಕೂಟದಲ್ಲಿ ಗುಲ್ಬರ್ಗ, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)