ಶನಿವಾರ, ಮೇ 8, 2021
26 °C

ದಕ್ಷಿಣ ಕೊರಿಯಾ: ಲೀ ಪಕ್ಷಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್ (ಎಎಫ್‌ಪಿ): ದಕ್ಷಿಣ ಕೊರಿಯಾದ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ನೇತೃತ್ವದ ಆಡ ಳಿತಾರೂಢ ನ್ಯೂ ಫ್ರಾಂಟಿಯರ್ ಪಾರ್ಟಿ (ಎನ್‌ಎಫ್‌ಪಿ) ಬಹುಮತ ಪಡೆದುಕೊಂಡಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನಡಿ ಬರೆಯಲಿದೆ ಎಂದೇ ನಂಬಲಾಗಿದ್ದ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು.ಉತ್ತರ ಕೊರಿಯಾ ನಡೆಸಲು ಉದ್ದೇಶಿಸಿರುವ ರಾಕೆಟ್ ಉಡಾ ವಣೆಯು ನೆರೆಹೊರೆಯ ಕಮ್ಯುನಿಸ್ಟ್ ರಾಷ್ಟ್ರಗಳ ನಡುವೆ ಒತ್ತಡಕ್ಕೆ ಕಾರಣವಾಗಿದ್ದರೂ, ಈ ವಿಷಯ ದಕ್ಷಿಣ ಕೊರಿಯಾದ ಚುನಾವಣೆ ಮೇಲೆ ಅಷ್ಟೇನೂ ಪ್ರಭಾವ ಬೀರ ಲಿಲ್ಲ. ಬದಲಾಗಿ ದರ ಹೆಚ್ಚಳ, ಶಿಕ್ಷಣ ವೆಚ್ಚ ಏರಿಕೆ, ನಿರುದ್ಯೋಗ ಸಮಸ್ಯೆ, ಶ್ರೀಮಂತ -ಬಡವರ ನಡುವಿನ ಅಂತರ ಹೆಚ್ಚಳ ಮುಂತಾದವು ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳಾಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.