ದಕ್ಷಿಣ ಧ್ರುವದ ಅಂಟಾರ್ಟಿಕ್‌ ಮಂಜುಗಡ್ಡೆ ಅಡಿ ಅಳಿವೆ ಪತ್ತೆ!

7

ದಕ್ಷಿಣ ಧ್ರುವದ ಅಂಟಾರ್ಟಿಕ್‌ ಮಂಜುಗಡ್ಡೆ ಅಡಿ ಅಳಿವೆ ಪತ್ತೆ!

Published:
Updated:

ನ್ಯೂಯಾರ್ಕ್‌ (ಪಿಟಿಐ): ದಕ್ಷಿಣ ಧ್ರುವ ದ ಅಂಟಾರ್ಟಿಕ್‌ ಸಾಗರದ ಮಂಜು ಗಡ್ಡೆ  ಅಡಿ ಇದೇ ಮೊದಲ ಬಾರಿಗೆ ಅಳಿವೆ ಯೊಂದು (ನದಿಮುಖ) ಪತ್ತೆಯಾಗಿದೆ.ಪಶ್ಚಿಮ ಅಂಟಾರ್ಕ್‌ಟಿಕ್‌ ಮಂಜು ಗಡ್ಡೆಯ ದಪ್ಪ ಪದರಿನ ಅಡಿ ಈ ಅಳಿವೆಯನ್ನು  ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ನದಿಯ ಸಿಹಿ ನೀರು ಮತ್ತು ಸಾಗರದ ಉಪ್ಪು ನೀರು ಸೇರುವ ಈ ನದಿಮುಖಜ ಪ್ರದೇಶಲ್ಲಿಯ ಪರಿಸರದಲ್ಲಿ ಒಂದೇ ಪ್ರಭೇದಕ್ಕೆ ಸೇರಿದ ವಿಚಿತ್ರ ಜಲಚರಗಳೂ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಗಳು ಶಂಕಿಸಿದ್ದಾರೆ. ಒಂದು ಕಿ.ಮೀ ಅಗಲ ಮತ್ತು ಏಳು ಮೀಟರ್‌ ಆಳದ ಈ ನದಿ ಗಳು ಸಾಗರವನ್ನು ಸೇರುವಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ತೆರೆದುಕೊಂಡಿದ್ದು, ಗುಪ್ತ ಗಾಮಿನಿಯಂತೆ ಹರಿಯುತ್ತವೆ. ನ್ಯೂಜಿಲೆಂಡ್‌ನ ವಿಕ್ಟೋರಿಯಾ ವಿ.ವಿ ಯ ಹೌ ಹೊರ್ಗಾನ್‌ ನೇತೃತ್ವದ ವಿಜ್ಞಾನಿಗಳ ತಂಡ ಈ ಅಳಿವೆಯನ್ನು ಪತ್ತೆ ಹಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry