ದಕ್ಷಿಣ ಭಾರತ ಅಮೆಚೂರ್ ಗಾಲ್ಫ್:ಅಗ್ರಸ್ಥಾನದಲ್ಲಿ ಖಾಲಿನ್

7

ದಕ್ಷಿಣ ಭಾರತ ಅಮೆಚೂರ್ ಗಾಲ್ಫ್:ಅಗ್ರಸ್ಥಾನದಲ್ಲಿ ಖಾಲಿನ್

Published:
Updated:
ದಕ್ಷಿಣ ಭಾರತ ಅಮೆಚೂರ್ ಗಾಲ್ಫ್:ಅಗ್ರಸ್ಥಾನದಲ್ಲಿ ಖಾಲಿನ್

ಬೆಂಗಳೂರು: ಮಿಂಚಿನ ಪ್ರದರ್ಶನ ನೀಡಿದ ಸ್ಥಳೀಯ ಪ್ರತಿಭೆ ಖಾಲಿನ್ ಜೋಶಿ ಅವರು ಇಲ್ಲಿ ನಡೆಯುತ್ತಿರುವ `ಟೊಯೋಟ ಕೊರೊಲಾ ಅಲ್ಟಿಸ್~ ದಕ್ಷಿಣ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೂರನೇ ದಿನ ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡರು.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ ನಲ್ಲಿ ಗುರುವಾರ ಪ್ರಭಾವಿ ಪ್ರದರ್ಶನ ನೀಡಿದ ಖಾಲೀನ್ ಜೋಶಿ ನಿಖರ ಕ್ಲಬ್‌ಗಳನ್ನು ಬೀಸಿ (75+72+70 ಒಟ್ಟು 217) ಅಗ್ರಸ್ಥಾನದಲ್ಲಿದ್ದ ಎಸ್. ಚಿಕ್ಕರಂಗಪ್ಪ ಅವರನ್ನು ಹಿಂದಿಕ್ಕಿದರು. ಚಿಕ್ಕರಂಗಪ್ಪ (70+75+74 ಒಟ್ಟು 219) ಎರಡನೇ ಸ್ಥಾನ ಪಡೆದುಕೊಂಡರು. `ನಾನು ಯಾವಾಗಲೂ ಆಟವನ್ನು ಸಂತೋಷದಿಂದ ಅನುಭವಿಸುತ್ತೇನೆ. ಇಂದಿನ ಪಂದ್ಯದಲ್ಲಿ ಚೆನ್ನಾಗಿ ಆಡಿದೆ. ಆದ್ದರಿಂದ ಅಗ್ರಸ್ಥಾನ ಪಡೆದೆ. ಚಿಕ್ಕರಂಗಪ್ಪ ಹಾಗೂ ರಾಹುಲ್ ರವಿ ಅವರೊಂದಿಗೆ ಆಡುವಾಗ ಸದಾ ಸಂಭ್ರಮಿಸುತ್ತೇನೆ~ ಎಂದು ಜೋಶಿ ಪ್ರತಿಕ್ರಿಯಿಸಿದರು.ಕರಾರುವಕ್ಕಾದ ಆಟ ಪ್ರದರ್ಶಿಸಿದ ಇನ್ನೊಬ್ಬ ಸ್ಪರ್ಧಿ ಕೆ. ಮದನ್ (74+75+72 ಒಟ್ಟು 222) ಮೂರನೇ ಸ್ಥಾನವನ್ನು ಪಡೆದು ಅಚ್ಚರಿ ಮೂಡಿಸಿದರೆ, ಗುವಾಂಗ್ ಜೌ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಅಭಿಜಿತ್ ಚಡಾ (76+73+73ಒಟ್ಟು 223) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ರಾಹುಲ್ ರವಿ ಒಟ್ಟು (75+72+75 ಒಟ್ಟು223) ಐದನೇ ಸ್ಥಾನ ಪಡೆದರೆ, ಒಟ್ಟು 227 ಪಾಯಿಂಟ್ ಗಳಿಸಿದ ಸಮರ್‌ಜೀತ್ ಸಿಂಗ್ ಕೊನೆಯ ಸ್ಥಾನ ಪಡೆದುಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry