ಸೋಮವಾರ, ಜನವರಿ 27, 2020
22 °C
ಶಾಂತಿಗಾಗಿ ಸರ್ಕಾರ, ಬಂಡುಕೋರರಿಗೆ ಬಾನ್‌ ಕರೆ

ದಕ್ಷಿಣ ಸುಡಾನ್‌ನಲ್ಲಿ ನಿಲ್ಲದ ಹಿಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಿಲಾ (ಎಎಫ್‌ಪಿ): ದಕ್ಷಿಣ ಸುಡಾ­ನ್‌­ನಲ್ಲಿನ ಹಿಂಸಾ­­­­­ಚಾರ­ ಕೊನೆಗೊಳಿಸು­ವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯ­ದರ್ಶಿ ಬಾನ್‌ ಕಿ ಮೂನ್‌ ಕರೆ ನೀಡಿದ್ದಾರೆ.ಫಿಲಿಪ್ಪೀನ್ಸ್‌ಗೆ ಎರಡು ದಿನಗಳ ಭೇಟಿ ನೀಡಿರುವ ಮೂನ್‌, ಭಾನುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತ­ನಾಡಿ, ಹಿಂಸಾಚಾರದಿಂದ ಸಾವಿರಾರು ಜನರು ತೊಂದ­ರೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.ದ್ವೇಷ­­ ನಿಲ್ಲಿಸಿ, ನಾಗರಿಕರ ಮೇಲಿನ ಹಿಂಸೆಯನ್ನು ಅಂತ್ಯಗೊಳಿಸುವಂತೆ ಎಲ್ಲ ರಾಜ­­ಕಾ­ರಣಿ­ಗಳು, ಸೇನೆ ಹಾಗೂ ಉಗ್ರ­ಗಾಮಿ ನಾಯಕರನ್ನು ಒತ್ತಾಯಿಸುವು­ದಾಗಿ ಅವರು ಹೇಳಿದರು.ಬಿಕ್ಕಟ್ಟಿನಿಂದ ಹೊರಬರಲು ರಾಜ­ಕೀಯ ಮಾರ್ಗೋ­ಪಾಯ ಕಂಡು­ಕೊ­­ಳ್ಳು­ವಂತೆ ಹಾಗೂ ತಮ್ಮ ಬೆಂಬಲಿ­ಗರಿಗೆ ಶಸ್ತ್ರಾಸ್ತ್ರ ಕೆಳಗಿಡಲು ಆದೇಶಿಸು­ವಂತೆ ದಕ್ಷಿಣ ಸುಡಾನ್‌ ಅಧ್ಯಕ್ಷ ಸಾಲ್ವಾ ಕೀರ್‌ ಮತ್ತು ಅವರ ಪ್ರತಿ­ರೋಧಿ ವಜಾ­­ಗೊಂಡ ಉಪಾಧ್ಯಕ್ಷ ರೀಕ್‌ ಮಾಚಾರ್‌ ಅವರನ್ನು ಮೂನ್‌ ಆಗ್ರಹಿಸಿದರು.ತಮ್ಮ ಬೆಂಬಲಿಗರು ಕೇಳುವಂತಹ ಸ್ಪಷ್ಟ ಮತ್ತು ಪರಿಣಾಮಕಾರಿ ಸಂದೇಶ­ವನ್ನು ರವಾನೆ ಮಾಡಲು ಇಬ್ಬರೂ ನಾಯಕರು ಎಲ್ಲ ಅಧಿಕಾರ ಬಳಸು­ವಂತೆ ಅವರು ಸೂಚಿಸಿದರು.‘ನಿರಂತರವಾದ ಹಿಂಸಾಚಾರವು ಜನಾ­ಂ­­­ಗೀಯ ಅಥವಾ ಇತರ ಯಾವು­ದಿ­­ದ್ದರೂ, ಅದು ಸಂಪೂರ್ಣ ಅಸಮ­ರ್ಥ­­ನೀಯ ಮತ್ತು ಈ ಚಿಕ್ಕ ರಾಷ್ಟ್ರದ ಭವಿ­ಷ್ಯಕ್ಕೆ ಭಯಾನಕ ಬೆದರಿಕೆ ಒಡ್ಡು­ವುದು’ ಎಂದು ಅವರು ಎಚ್ಚರಿಸಿದರು.ಈ ಮಧ್ಯೆ, ಶಾಂತಿಪಾಲನಾ ಪಡೆಯ ೪೩ ಭಾರ­ತೀಯ ಯೋಧರು ಬಂಡು­ಕೋರರ ವಿರುದ್ಧ ಧೈರ್ಯ­ದಿಂದ ಹೋರಾಡಿ ಹೆಚ್ಚಿನ ಸಾವು–ನೋವು ತಡೆದಿರು­ವು­ದಾಗಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿ­ಯೊಬ್ಬರು ಪ್ರಶಂಸಿಸಿದ್ದಾರೆ.ದೇಶದಲ್ಲಿ ಸರ್ಕಾರದ ವಿರುದ್ಧ ದಂಗೆ ಎಬ್ಬಿಸಲು ಮಾಚಾರ್‌ ಯತ್ನಿಸಿದ್ದಾರೆ ಎಂದು ಕೀರ್‌ ಆರೋಪಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಬಂಡುಕೋ­ರ ನಾಯಕ, ಅಧ್ಯಕ್ಷರೇ ರಕ್ತಪಾತಕ್ಕೆ ಕಾರ­ಣ­­ರಾಗಿ­­ದ್ದಾರೆ ಎಂದು ದೂರಿದ್ದಾರೆ.೨೦೧೧ರಲ್ಲಿ ಸ್ವಾತಂತ್ರ್ಯ ಪಡೆದ ತೈಲ ಶ್ರೀಮಂತಿಕೆಯ ದಕ್ಷಿಣ ಸುಡಾನ್‌ನಲ್ಲಿ ಅಂತಃಕಲಹಕ್ಕೆ ದಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿ­ರುವ ಎರಡೂ ಕಡೆಯವರ ಘರ್ಷಣೆ­ಯಲ್ಲಿ ಕನಿಷ್ಠ ೫೦೦ ಮಂದಿ ಮೃತಪಟ್ಟಿ­ದ್ದಾರೆ. ಸಾವಿರಾರು ಜನ ನಿರಾಶ್ರಿತ­ರಾಗಿ­ದ್ದಾರೆ. ವಿಶ್ವಸಂಸ್ಥೆ ಶಿಬಿರದಲ್ಲಿ ೪೦ ಸಾವಿರಕ್ಕೂ ಅಧಿಕ ನಾಗರಿಕರು ಆಶ್ರಯ ಪಡೆದಿ­ದ್ದಾರೆ. ಬಂಡುಕೋರರ ಗುಂಡಿಗೆ ವಿಶ್ವ­ಸಂಸ್ಥೆ ಶಾಂತಿಪಾಲನಾ ಪಡೆಯ ­ಇಬ್ಬರು ಭಾರತೀಯ ಯೋಧರು ಬಲಿ ಆಗಿದ್ದು, ತನ್ನ ಪ್ರಜೆಗಳನ್ನು ತೆರವು ಮಾಡು­ತ್ತಿದ್ದ ಅಮೆರಿಕದ ವಿಮಾನ­ವೊಂದು ದಾಳಿಯಿಂದ ಹಾನಿಗೊಂಡಿದೆ.

ಪ್ರತಿಕ್ರಿಯಿಸಿ (+)