ದಕ್ಷ ಅಧಿಕಾರಿಗಳು ಇಂದಿಗೂ ಸ್ಮರಣೀಯರು

7
ಅಭಿನಂದನಾ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ಮನದಾಳದ ಮಾತು

ದಕ್ಷ ಅಧಿಕಾರಿಗಳು ಇಂದಿಗೂ ಸ್ಮರಣೀಯರು

Published:
Updated:

ಬೆಂಗಳೂರು: ‘ನನ್ನ ನಾಲ್ಕೂವರೆ ವರ್ಷದ ಸುಸ್ಥಿರ ಆಡಳಿತಕ್ಕೆ ಅಂದಿನ ಪ್ರಾಮಾಣಿಕ ಅಧಿಕಾರಿಗಳು ಕಾರಣರು. ಅವರಲ್ಲಿ ಎಂ.ಕೆ.­ಶಂಕರ­ಲಿಂಗೇ­ಗೌಡ ಅವರು ಪ್ರಮುಖರು’ ಎಂದು ಕೇಂದ್ರದ ಮಾಜಿ ಸಚಿವ ಎಸ್‌.ಎಂ.ಕೃಷ್ಣ ಹೇಳಿದರು.ಎಂ.ಕೆ. ಶಂಕರಲಿಂಗೇಗೌಡ ಅಭಿ­ನಂದನಾ ಸಮಿತಿಯು ನಗರದಲ್ಲಿ ಸೋಮ­ವಾರ ಆಯೋಜಿಸಿದ್ದ ಶಂಕರ ಲಿಂಗೇಗೌಡ  ಅಭಿನಂದನಾ ಸಮಾ­ರಂಭ­ದಲ್ಲಿ ಅವರು ಮಾತನಾಡಿದರು.‘ದಕ್ಷ, ನಿಷ್ಪಕ್ಷಪಾತ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಶಂಕರಲಿಂಗೇಗೌಡ ಅವರು ಯಾವುದೇ ಹುದ್ದೆಯಲ್ಲಿರಲಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಸಂವೇದನಾಶೀಲರಾಗಿ ಆಲಿಸಿ, ಪರಿಹರಿ­ಸುವ ಕಾರ್ಯವನ್ನು ಮಾಡಿದ್ದಾರೆ’ ಎಂದರು.‘ಬೆಂಗಳೂರು–ಮೈಸೂರು ಹೆದ್ದಾರಿ ಯೋಜನೆಯು ನನ್ನ ಕನಸಿನ ಕೂಸಾ­ಗಿತ್ತು. ಅದನ್ನು ಸಾಕಾರರೂಪದಲ್ಲಿ ತಂದವರು ಶಂಕರಲಿಂಗೇಗೌಡ ಹಾಗೂ ಕಂಬಳಿ ಎಂಬ ಪ್ರಾಮಾಣಿಕ ಅಧಿಕಾರಿ­ಗಳು. ಆ ರಸ್ತೆಯಲ್ಲಿ ನಾನು ಸಂಚರಿಸು­ವಾಗ ಇಂದಿಗೂ ಅವರನ್ನು ನೆನಪಿಸಿ ಕೊಳ್ಳುತ್ತೇನೆ’ ಎಂದು  ಹೇಳಿದರು.‘ವಿಕಾಸ ಸೌಧದ ಪರಿಕಲ್ಪನೆ ಬಂದು ಅದು ಸಾಕಾರ ರೂಪು ಹೊಂದಲು, ಮತ್ತು ಅದರ ಹೆಸರು ವಿಕಾಸ ಸೌಧ  ಎಂದು ಇಡಿ ಎಂದು ಸೂಚಿಸಿದವರು ಶಂಕರಲಿಂಗೇಗೌಡ ಅವರು ’ ಎಂದರು.ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಮಾತನಾಡಿ, ‘ಗಾಂಧಿಭವನವನ್ನು ಸುಂದರಗೊಳಿಸಿ, ಅದಕ್ಕೆ ಒಂದು ಸ್ಥಾನವನ್ನು ಕಲ್ಪಿಸಿದ­ವರು ಶಂಕರಲಿಂಗೇಗೌಡ ಅವರು. ಅವರು ತಮ್ಮ ಕೆಲಸವನ್ನು ಸೇವೆ­ಯೆಂದೇ ಪರಿಗಣಿಸಿ ಮಾಡಿದವರು’ ಎಂದರು. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್‌ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry