ಶುಕ್ರವಾರ, ಮೇ 14, 2021
28 °C

ದ.ಕ: 38 ಗ್ರಾ.ಪಂ ಸ್ಥಾನಗಳಿಗೆ ಮತದಾನ 25ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯ 35 ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 38 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಇದೇ 25ರಂದು ಮತದಾನ ನಡೆಯಲಿದೆ.ಚುನಾವಣೆ ಪ್ರಕ್ರಿಯೆ ಸೆ. 5ರಂದು ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಸೆ.12, ನಾಮಪತ್ರ ಪರಿಶೀಲಿಸುವ ದಿನ ಸೆ. 13, ಉಮೇದುವಾರಿಕೆ ಹಿಂತೆದುಕೊಳ್ಳಲು ಕೊನೆಯ ದಿನ ಸೆ. 15, ಮತ ಎಣಿಕೆ ಸೆ. 29ರಂದು ನಡೆಯಲಿದೆ. ಉಪಚುನಾವಣೆಗೆ ಸ್ಪರ್ಧಿಸ ಬಯಸಿ ನಾಮಪತ್ರ ಸಲ್ಲಿಸಲು ಇಚ್ಛಿಸುವವರು ಸಂಬಂಧಪಟ್ಟ ತಹಸೀಲ್ದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಎನ್.ಎಸ್. ಚೆನ್ನಪ್ಪ ಗೌಡ ಅವರ ಪ್ರಕಟಣೆ ತಿಳಿಸಿದೆ.ತಾಲ್ಲೂಕಿನಲ್ಲಿ 13 ಗ್ರಾಮ

ಮಂಗಳೂರು ತಾಲ್ಲೂಕಿನ 13 ಗ್ರಾಮಗಳಲ್ಲಿ ಉಪಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ರಜಾದಿನ ಹೊರತುಪಡಿಸಿ ಸೆ.5ರಿಂದ 9ರ ವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ರವರೆಗೆ ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸುವರು ಎಂದು ತಹಸೀಲ್ದಾರ್ ರವಿಚಂದ್ರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಚುನಾವಣೆ ನಡೆಯುವ ಕ್ಷೇತ್ರಗಳು: ದರೆಗುಡ್ಡೆ- ಸಾಮಾನ್ಯ, ಬೆಳುವಾಯಿ(1)- ಅನುಸೂಚಿತ ಪಂಗಡ ಮಹಿಳೆ, ಬೆಳುವಾಯಿ (3)- ಸಾಮಾನ್ಯ ಮಹಿಳೆ, ಪಾಲಡ್ಕದ ಕಡಂದಲೆ- ಸಾಮಾನ್ಯ ಮಹಿಳೆ, ಪೆರ್ಮುದೆ- ಹಿಂದುಳಿದ `ಅ~ವರ್ಗ, ಜೋಕಟ್ಟೆ ತೋಕೂರು- ಅನುಸೂಚಿತ ಪಂಗಡ ಮಹಿಳೆ, ಮೂಡುಶೆಡ್ಡೆ 6- ಸಾಮಾನ್ಯ, ಮೂಡುಶೆಡ್ಡೆ 7- ಸಾಮಾನ್ಯ, ಮುಚ್ಚೂರು- ಸಾಮಾನ್ಯ, ಬಡಗಎಡಪದವು- ಸಾಮಾನ್ಯ, ಕುಪ್ಪೆಪದವು ಕಿಲೆಂಜಾರು- ಸಾಮಾನ್ಯ, ಗುರುಪುರ ಮೂಳೂರು- ಹಿಂದುಳಿದ `ಅ~ವರ್ಗ, ನೀರುಮಾರ್ಗ ಬೊಂಡಂತಿಲ- ಸಾಮಾನ್ಯ, ಪಾವೂರು- ಸಾಮಾನ್ಯ, ಮಂಜನಾಡಿ- ಸಾಮಾನ್ಯ ಕ್ಷೇತ್ರ.ಶುಚಿತ್ವ ಸಮುಚ್ಛಯ ನಿರ್ಮಾಣ

ಕಾಸರಗೋಡು:
ಸಂಪೂರ್ಣ ಶುಚಿತ್ವ ಯಜ್ಞ ಅಂಗವಾಗಿ ಜಿಲ್ಲೆಯಲ್ಲಿ 28 ಸಾರ್ವಜನಿಕ ಶುಚಿತ್ವ ಸಮುಚ್ಛಯಗಳ ನಿರ್ಮಾಣ ಪೂರ್ಣಗೊಂಡಿದೆ.57 ಸಾರ್ವಜನಿಕ ಶುಚಿತ್ವ ಸಮುಚ್ಛಯಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. 22 ಸಮುಚ್ಛಯಗಳ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ. ಸಮುಚ್ಛಯವೊಂದಕ್ಕೆ ರೂ.1.60ಲಕ್ಷವನ್ನು ಜಿಲ್ಲಾ ಸಂಪೂರ್ಣ ಶುಚಿತ್ವ ಸಮಿತಿ ನೀಡುತ್ತಿದೆ.ಉದುಮ ಪಂಚಾಯಿತಿಯಲ್ಲಿ ಬೇಕಲ್ ಬೀಚ್, ತೃಕ್ಕನ್ನಾಡು ಕ್ಷೇತ್ರ ಬಳಿ, ಪಂಚಾಯಿತಿ ಕಚೇರಿ ಬಳಿ, ಮಡಿಕೈ ಪಂಚಾಯತಿಯಲ್ಲಿ ಏರಿಕ್ಕುಳ ಶಾಲೆ, ಕಾಞ್ಞೆರಪೊಯಿಲ್ ಶಾಲೆ ಮತ್ತು ಬಂಗಳ ಶಾಲೆ ಬಳಿ, ಪುಲ್ಲೂರು-ಪೆರಿಯ ಪಂಚಾಯಿತಿಯಲ್ಲಿ ನಾಲಿಕ್ಕರ ಕಾಲನಿ, ತೃಕ್ಕರಿಪುರ ಪಂಚಾಯಿತಿಯಲ್ಲಿ ನಡಕ್ಕಾವು ದಿನೇಶ್ ಬೀಡಿ ಕಂಪೆನಿ ಬಳಿ, ಎಳಂಬಚ್ಚಿ ನೆಯ್ಗೆ ಸಹಕಾರಿ ಸಂಘ, ಕೊಯಂಗರ ಆಯುರ್ವೇದ ಆಸ್ಪತ್ರೆ, ನಡಕ್ಕಾವು ಜಂಕ್ಷನ್, ಕಯ್ಯೂರು- ಚೀಮೇನಿ ಪಂಚಾಯಿತಿಯ ಚಾನಡ್ಕ ಐಎಚ್‌ಆರ್‌ಡಿ, ವಲಿಯಪರಂಬಿನ ಇಡಯಿಲಕ್ಕಾಡ್ ನವೋದಯ ವಾಚನಾಲಯ, ಕೋಡೋಂ-ಬೇಳೂರು ಪಂಚಾಯಿತಿಯ ಎರುಮಕುಳ ಪರಿಶಿಷ್ಟ ಜಾತಿ ಕಾಲನಿ, ಕಾಲಿಚ್ಚನಡ್ಕ ಬಸಾರ್, ಚುಳ್ಳಿಕ್ಕರ ಪೇಟೆ, ಆನೆಕಲ್ಲು ವಾಚನಾಲಯ, ಈಸ್ಟ್ ಏಳೇರಿ ಪಂಚಾಯತಿನ ಚಿಟ್ಟಾರಿಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ತಯ್ಯೇನಿ ಬಸ್ ನಿಲ್ದಾಣ, ಸರ್ಕಾರಿ ಟಿ.ಟಿ.ಐ., ಚೆಂಗಳ ಪಂಚಾಯಿತಿನ ನೆಲ್ಲಿಕಟ್ಟೆ, ಚೆಮ್ನಾಡು ಪಂಚಾಯಿತಿಯ ಪೊಯಿನಾಚಿ, ಬದಿಯಡ್ಕ ಪಂಚಾಯಿತಿ ಕಚೇರಿ ಬಳಿ, ಮುಳಿಯಾರು ಪಂಚಾಯತಿನ ಕಾನತ್ತೂರು ಮಹಾಲಿಂಗೇಶ್ವರ ಕ್ಷೇತ್ರ, ಕುತ್ತಿಕೋಲ್ ಸಂಡೇ ಥಿಯೇಟರ್, ಮಂಗಲ್ಪಾಡಿ ಪಂಚಾಯತಿನ ಉಪ್ಪಳ ಬಸ್ ನಿಲ್ದಾಣದಲ್ಲಿ ಶುಚಿತ್ವ ಸಮುಚ್ಛಯಗಳನ್ನು ಪೂರ್ಣಗೊಳಿಸಲಾಗಿದೆ.ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಎನ್.ಸತೀಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.