ದಟ್ಟಮಂಜು: ನೂರು ವಾಹನಗಳ ಡಿಕ್ಕಿ!

7

ದಟ್ಟಮಂಜು: ನೂರು ವಾಹನಗಳ ಡಿಕ್ಕಿ!

Published:
Updated:

ಲಂಡನ್ (ಪಿಟಿಐ): ದಟ್ಟವಾದ ಮಂಜು ಕವಿದಿದ್ದರಿಂದ ಸೇತುವೆಯೊಂದರ ಮೇಲೆ ಸುಮಾರು ನೂರು ವಾಹನಗಳು ಡಿಕ್ಕಿಯಾಗಿ 200 ಜನ ಗಾಯಗೊಂಡ ಘಟನೆ ಆಗ್ನೇಯ ಬ್ರಿಟನ್‌ನ ಕೆಂಟ್ ಕೌಂಟಿಯಲ್ಲಿ ಗುರುವಾರ ನಡೆದಿದೆ.ಮಂಜು ಕವಿದಿದ್ದರಿಂದ ಸುಮಾರು ಹತ್ತು ನಿಮಿಷಗಳ ಕಾಲ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗುತ್ತಲೇ ಇದ್ದವು. ಘಟನೆಯಲ್ಲಿ ಗಾಯಗೊಂಡಿರುವ 200 ಜನರ ಪೈಕಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಂದು ಪೊಲೀಸರು ಶಂಕಿಸಿದ್ದಾರೆ.ಘಟನೆಯಲ್ಲಿ ಸುಮಾರು ನೂರು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿವೆ. ಬೆಳಕಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ಸೇತುವೆಯ ಮೇಲೆ ಸಮಸ್ಯೆ ಸೃಷ್ಟಿಯಾಯಿತು ಎಂದು ಕೆಂಟ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ವಾಹನಗಳಲ್ಲಿ ದಕ್ಷಿಣದ ಕಡೆಗೆ ಹೋಗುತ್ತಿರುವ ಐವರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.`ಸೇತುವೆಯಲ್ಲಿ ಬೆಳಕಿನ ಪ್ರಮಾಣ ಕಡಿಮೆ ಇತ್ತು. ಈ ಸ್ಥಿತಿಯಲ್ಲಿ ಹೆಡ್‌ಲೈಟ್ ಬಳಸದೆ ಚಾಲಕರು ಸೇತುವೆ ದಾಟಲು ಪ್ರಯತ್ನಿಸುತ್ತಿದ್ದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry