ಮಂಗಳವಾರ, ಸೆಪ್ಟೆಂಬರ್ 17, 2019
21 °C

ದತ್ತಾಂಶ ಸುರಕ್ಷತೆ: ಟ್ರಾಯ್ ಶಿಫಾರಸು

Published:
Updated:

ಮೊಬೈಲ್ ಕಳೆದುಹೋದರೆ, ಅಥವಾ ಕಳ್ಳತನವಾದರೆ ಇನ್ನು ಮುಂದೆ ಆತಂಕ ಪಡುವ ಅಗತ್ಯ ಬೇಡ. ಅದರಲ್ಲಿರುವ ಮಾಹಿತಿ, ದತ್ತಾಂಶ ಎಲ್ಲವೂ ಸುರಕ್ಷಿತವಾಗಿರುತ್ತದೆ. ಇಂತದೊಂದು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿ ಹಂತದಲ್ಲಿದೆ.ಅಷ್ಟೇ ಅಲ್ಲ, ಇಂತಹ ಭದ್ರತಾ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿಗಳಿಗೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.ಮೊಬೈಲ್ ಮಾಹಿತಿ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ `ಟ್ರಾಯ್~ ಇಂಥದೊಂದು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಅಕ್ರಮ ಹ್ಯಾಂಡ್‌ಸೆಟ್ ಮಾರುಕಟ್ಟೆ ನಿಯಂತ್ರಿಸುವುದು  ಮತ್ತು ಮೊಬೈಲ್ ಕಳ್ಳತನವಾದ ಸಂದರ್ಭದಲ್ಲಿ ಮಾಹಿತಿ ಸೋರಿಕೆ ತಡೆಗಟ್ಟುವುದು ಇದರ ಮುಖ್ಯ ಉದ್ದೇಶ.ಸೆಪ್ಟೆಂಬರ್ 27ರಿಂದ ಅನಪೇಕ್ಷಿತ ಕರೆ ನಿಷೇಧ ಜಾರಿಗೊಳಿಸಲು ಮುಂದಾಗಿರುವ `ಟ್ರಾಯ್~ ಇದು ಯಶಸ್ವಿಯಾದರೆ, ಅದರ ಬೆನ್ನಲ್ಲೇ, ಮೊಬೈಲ್ ಕಳ್ಳತನ ತಡೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಿದೆ.

`ಅಂತರರಾಷ್ಟೀಯ  ಮೊಬೈಲ್ ಉಪಕರಣ ಪತ್ತೆ (ಐಎಂಇಐ) ಸಂಖ್ಯೆ ಮೂಲಕ ಕಳ್ಳತನವಾದ ಮೊಬೈಲ್ ಪತ್ತೆ ಹಚ್ಚುವ ತಂತ್ರಜ್ಞಾನ ಈ ತಿಂಗಳಾಂತ್ಯಕ್ಕೆ ಜಾರಿಗೆ ಬರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.`ಐಎಂಇಐ~ ವಿಶಿಷ್ಠ ಸರಣಿ ಸಂಖ್ಯೆಯಾಗಿದ್ದು, ಇದರ ಮೂಲಕ ಹ್ಯಾಂಡ್‌ಸೆಟ್ ಪತ್ತೆ ಹಚ್ಚಬಹುದು.ಸದ್ಯ ದೂರವಾಣಿ ಸೇವಾ ಸಂಸ್ಥೆಗಳು `ಸಿಮ್~ ಕಾರ್ಡ್ ಲಾಕ್ ಮಾಡುವ ಸಾಧ್ಯತೆ ಹೊರತು ಕಳೆದು ಹೋದ ಮೊಬೈಲ್ ದತ್ತಾಂಶ ಸಂರಕ್ಷಣೆಗೆ ಯಾವುದೇ ತಂತ್ರಜ್ಞಾನ ಇಲ್ಲ.

Post Comments (+)