ದತ್ತಾತ್ರೇಯ ಬೇಂದ್ರೆ

7
ಚಂದ ಪದ್ಯ

ದತ್ತಾತ್ರೇಯ ಬೇಂದ್ರೆ

Published:
Updated:
ದತ್ತಾತ್ರೇಯ ಬೇಂದ್ರೆ

ಬೇಂದ್ರೆ ಅಂದ್ರೆ ಬೇಂದ್ರೆ ನಮ್ಮ

ದತ್ತಾತ್ರೇಯ ಬೇಂದ್ರೆ

ಅಂಬಿಕಾತನಯದತ್ತ

ವರಕವಿ ನಮ್ಮ ಬೇಂದ್ರೆಧಾರವಾಡದಲ್ಲಿ ಹುಟ್ಟಿ

ಕಾವ್ಯ ದೀಕ್ಷೆ ತಳೆದರು

ಗೆಳೆಯರ ಗುಂಪನ್ನು ಕಟ್ಟಿ

ಕಾವ್ಯವನ್ನು ಬೆಳೆದರುನಾಡು ನುಡಿಯ ಸೇವೆ ಮಾಡಿ

ಹಾಡಿ ಹೃದಯ ಮಿಡಿದರು

ಚಿಗರಿಗಂಗಳ ಚೆಲುವಿ ಭೂಮಿ

ಜೀವದೊಡವೆ, ನುಡಿದರುಸಖೀಗೀತ, ಮೇಘದೂತ

ನಮ್ಮ ಎದೆಗೆ ತಂದರು

ಅದಕು ಇದಕು ಒಲವೇ ಬದುಕು

ಎಂದು ಕವಿಯು ಅಂದರು`ನಾಕುತಂತಿ'ಯನ್ನು ಮಿಡಿಸಿ

ನಾಕವನ್ನು ಸೆಳೆದರು

ಶಾಂತಿಮಂತ್ರವನ್ನು ನುಡಿಸಿ

ಭ್ರಾಂತಿಯನ್ನು ಕಳೆದರುದತ್ತಾತ್ರೇಯ ಬೇಂದ್ರೆ ಅಂದ್ರೆ

ನಮಗೆ ಪಂಚಪ್ರಾಣವು

ಎದೆಯ ಮಿಡಿವ ಗಾನ, ಕಾವ್ಯ

ಬದುಕಿಗೊಂದು ತ್ರಾಣವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry