ಭಾನುವಾರ, ಜನವರಿ 26, 2020
29 °C
ದೇವಲಗಾಣಗಾಪುರ: ಇಂದಿನಿಂದ ಮೂರು ದಿನ ಸಂಭ್ರಮ

ದತ್ತ ಜಯಂತಿ ಆಚರಣೆ: ಸಕಲ ಸಿದ್ಧತೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ಡಿ.16ರಿಂದ ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿಗೆ ತಾಲ್ಲೂಕು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿವೆ.ದತ್ತ ಜಯಂತಿಗೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಸುಮಾರು 1 ಲಕ್ಷ ಯಾತ್ರಿಕರು ಸೇರುವ ನಿರೀಕ್ಷೆ ಇದೆ. ಕುಡಿಯುವ ನೀರಿನ ವ್ಯವಸ್ಥೆ, ಮಹಾರಾಷ್ಟ್ರ ಮತ್ತು ಗುಲ್ಬರ್ಗ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಂದ ತಲಾ ಮೂರು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಬಿರಾದಾರ ಭಾನುವಾರ ‘ಪ್ರಜಾವಾಣಿ‘ಗೆ ತಿಳಿಸಿದರು.ಭೀಮಾ – ಅಮರ್ಜಾ ನದಿ ಸಂಗಮದಲ್ಲಿ ಯಾತ್ರಿಕರು ಪುಣ್ಯ ಸ್ನಾನ ಮಾಡಲು ಭೀಮಾ ಬ್ಯಾರೇಜ್‌ ಕೆಳಭಾಗದಲ್ಲಿ ಗೇಟ್‌ ಹಾಕಿ ನೀರು ಸಂಗ್ರಹಿಸಲಾಗಿದೆ. ಯಾತ್ರಿಕರು ನದಿ ಒಳಗೆ ಇಳಿಯ ಬಾರದು ಎಂದು ಅವರು ಮನವಿ ಮಾಡಿದರು.16ರಂದು ಮಧ್ಯಾಹ್ನ 12ಗಂಟೆಗೆ ದತ್ತ ಬಾಲಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ಜರುಗಲಿದೆ. ಇದಕ್ಕೂ ಮೊದಲು ಬಾಲಮೂರ್ತಿಯನ್ನು ಹಣ್ಣು, ಹೂವು, ಗುಲಾಲಗಳಿಂದ ಎರೆಯಲಾಗುತ್ತದೆ. ನಂತರ ಕಾಕಡಾರತಿ, ರುದ್ರಾಭಿಷೇಕ, ಪವಮಾನ ಅಭಿಷೇಕ ಹಾಗೂ ಸಂಜೆ ಮಹಾಮಂಗಳಾರತಿ ಜರುಗಲಿದೆ. 17ರಂದು ಸಂಜೆ 5ಗಂಟೆಗೆ ದೇವಸ್ಥಾನದ ಮಹಾದ್ವಾರದಿಂದ ಹನುಮಾನ ಮಂದಿರದ ವರೆಗೆ ರಥೋತ್ಸವ ಜರಗಲಿದೆ ಎಂದು ಅರ್ಚಕ ನರೇಂದ್ರ ಅವಧೂತ ಭಟ್‌ ಪೂಜಾರಿ ತಿಳಿಸಿದರು.18ರಂದು ಮಾರ್ಗಶಿಷ್ಯ ಕೃಷ್ಣ ಪ್ರತಿಪದದಂದು ಬೆಳಗ್ಗೆ 9ಗಂಟೆಗೆ ದೇವಸ್ಥಾನದ ಸಭಾ ಮಂಟಪ ದಲ್ಲಿ ಎಲ್ಲ ಮಧುಕರಿ ಜನರ ಸಮಕ್ಷಮದಲ್ಲಿ ಬಾಲಮೂರ್ತಿಗೆ ಆರತಿ ಮಾಡಲಾಗುತ್ತದೆ. ನಂತರ ತೊಟ್ಟಿಲನ್ನು ಕೆಳಗೆ ಇಳಿಸುವರು, ಅಲ್ಲದೇ ದತ್ತಾತ್ರೇಯ ಅವತಾರಿಗಳಾದ ನರಸಿಂಹ ಸರಸ್ವತಿ ಸ್ವಾಮಿಗಳು ಪೂರ್ವದಿಂದಲೂ ದತ್ತ ಜಯಂತಿ ಯನ್ನು ದೇವಲಗಾಣಗಾಪುರದಲ್ಲಿ ಆಚರಿಸಿ ಕೊಂಡು ಬಂದಿದ್ದಾರೆ ಎಂದು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)