`ದಬಾಂಗ್ 2'ನಲ್ಲಿ ಕರೀನಾ ಐಟಮ್

7

`ದಬಾಂಗ್ 2'ನಲ್ಲಿ ಕರೀನಾ ಐಟಮ್

Published:
Updated:

`ಮೇರೆ ಫೋಟೊ ಕೊ ಸೀನೇಸೆ ಚಿಪ್ಕಾಲೋ ಸಂಯ್ಯಾ ಫೆವಿಕಾಲ್ ಸೆ...' ಹಾಡು `ಝಂಡುಬಾಮ್'ನಷ್ಟೇ ಜನಪ್ರಿಯವಾಗಲಿದೆ ಎನ್ನುವುದು ಕರೀನಾ ಭರವಸೆಯಾಗಿದೆ.`ದಬಾಂಗ್ 1'ನಲ್ಲಿ ಮಲೈಕಾ ಅರೋರಾ `ಮೈ ಝಂಡುಬಾಮ್ ಹುಯಿ...ಡಾರ್ಲಿಂಗ್ ತೇರೆಲಿಯೆ, ಮುನ್ನಿ ಬದನಾಮ್ ಹುಯಿ ಡಾರ್ಲಿಂಗ್ ತೇರೆಲಿಯೆ' ಎಂದು ಮೈ ಕುಣಿಸಿದ್ದರು. `ದಬಾಂಗ್ -2'ನಲ್ಲಿಯೂ ಇಂಥದ್ದೊಂದು ಹಾಡಿದೆ ಎಂದು ಮಲೈಕಾ ಹೇಳಿದ್ದರೂ, ತಾವದಕ್ಕೆ ಹೆಜ್ಜೆ ಹಾಕುತ್ತಿಲ್ಲ ಎಂದು ಹಿಂದೆಯೇ ಸ್ಪಷ್ಟ ಪಡಿಸಿದ್ದರು. ಅವರಲ್ಲದಿದ್ದರೆ ಯಾರೆಂಬುದನ್ನು ಮಾತ್ರ ಹೇಳಿರಲಿಲ್ಲ. ಇದೀಗ  ಕರೀನಾ ಕಪೂರ್ ಕಡುನೀಲಿ ಲೆಹೆಂಗಾ, ಕಪ್ಪು ಕುಪ್ಪಸ ತೊಟ್ಟು ಹೆಜ್ಜೆ ಹಾಕಿದ್ದಾರೆ. `ಮುಝಕೊ ಪಟಾಲೇನಾ, ಮಿಸ್ಡ್‌ಕಾಲ್ ದೇಕೆ' ಎಂದು ಮುನ್ನಿಯಂತೆಯೇ ನರ್ತಿಸಿದ್ದಾರೆ.ಫರ‌್ಹಾ ಖಾನ್ ಬಹಳ ದಿನಗಳ ನಂತರ ನೃತ್ಯ ಸಂಯೋಜಿಸಿದ್ದು, ಇದು ಖುಷಿ ಕೊಟ್ಟಿದೆ ಎಂದು ಫರ‌್ಹಾ ಹೇಳಿಕೊಂಡಿದ್ದಾರೆ. “ಒಂದು ವರ್ಷದಲ್ಲಿ ಕೆಲವೇ ಹಾಡುಗಳಿಗೆ ಮಾತ್ರ ನೃತ್ಯ ಸಂಯೋಜಿಸಿಕೊಡುತ್ತೇನೆ. ದಬಾಂಗ್ ಚಿತ್ರದಲ್ಲಿ `ಮುನ್ನಿ ಬದನಾಮ್ ಹುಯಿ' ನಾನೇ ಆಯ್ಕೆಮಾಡಿಕೊಂಡಿದ್ದೆ. ಈ ಸಲ ಅರ್ಬ್ ಖಾನ್ `ಫೆವಿಕಾಲ್ ಸೆ' ಹಾಡನ್ನು ಆಯ್ಕೆ ಮಾಡಿದ್ದಾರೆ. ಕರೀನಾ ಕಪೂರ್ ಸಹ ಈ ಹಾಡಿಗಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಹೆಜ್ಜೆ ಹಾಕುವುದು ಕಷ್ಟವೇನಿರಲಿಲ್ಲ. ಸಾಮಾನ್ಯವಾಗಿ ಪೋಷಕರು ಮಕ್ಕಳು ಸೇರಿಯೇ ಹೆಜ್ಜೆ ಹಾಕುವಂಥ ಸ್ಟೆಪ್‌ಗಳನ್ನು ಹೇಳಿಕೊಡುವುದೇ ನನ್ನ ವಿಶೇಷ ಶೈಲಿಯಾಗಿದೆ. ಈ ಹಾಡಿನಲ್ಲಿಯೂ ಅದು ಮುಂದುವರಿದಿದೆ. ಅಶ್ಲೀಲವೆನಿಸದ, ದೇಹದ ಬಳುಕಿನಲ್ಲಿ ಲಾಸ್ಯ ತರಬೇಕಿತ್ತು. ಅದು ಈ ಹಾಡಿನಲ್ಲಿ ಮೂಡಿ ಬಂದಿದೆ' ಎಂದು ಫರ‌್ಹಾ ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.ದಬಾಂಗ್‌ನ ಮುನ್ನಿ ಬದನಾಮ್ ಹುಯಿ ಹಾಗೂ `ದಬಾಂಗ್ 2'ರ `ಫೆವಿಕಾಲ್ ಸೆ' ಹಾಡುಗಳಲ್ಲಿ ಯಾವುದು ಇಷ್ಟ ಎಂದು ಕೇಳಿದರೆ, ನಕ್ಕು ಒಂದರೆ ಗಳಿಗೆ ಸುಮ್ಮನಾಗುವ ಫರ‌್ಹಾ, `ನನ್ನ ಮಕ್ಕಳು, ದಿವಾ ಹಾಗೂ ಅನ್ಯಾರ ನಡುವೆ ಯಾರು ಇಷ್ಟ ಎಂದು ಕೇಳಿದಂತಿದೆ..' ಎನ್ನುತ್ತಾರೆ. ಈ ಹಾಡು ಸಹ ಮುನ್ನಿಯಂತೆಯೇ `ಐಕಾನಿಕ್' ಆಗಲಿದೆ ಎಂಬ ಆತ್ಮವಿಶ್ವಾಸವನ್ನಂತೂ ವ್ಯಕ್ತಪಡಿಸುತ್ತಾರೆ.ಕರೀನಾ ಕಪೂರ್‌ಗೆ ಒಂದೇ ಸಮಾಧಾನವೆಂದರೆ ಅವರ ಅಕ್ಕ, ಕರಿಶ್ಮಾ ಕಪೂರ್ ಮಗಳು ಸಮೈರಾಗೂ ಈ ಹಾಡು ಹಾಗೂ ಡಾನ್ಸು ಇಷ್ಟವಾಗಿದೆಯಂತೆ. ಅವರ ಕಾರಿನಲ್ಲಿಯೂ `ಫೆವಿಕಾಲ್ ಸೆ' ಹಾಡು ಕೇಳಬಹುದಾಗಿದೆ. `ಮ್ುಕೊ ಪಟಾಲೇನಾ ಮಿಸ್ಡ್ ಕಾಲ್ ದೇಕೆ' ರಿಂಗ್‌ಟೋನ್ ಸಹ ಫೋನಿಗೆ ಇಳಿದಾಗಿದೆಯಂತೆ. ಇಂಥ ಫನ್ನಿ ಹಾಗೂ ಕ್ರಂಚಿ ಹಾಡುಗಳನ್ನು ಮಕ್ಕಳೂ ಇಷ್ಟ ಪಡುತ್ತಾರೆ ಎನ್ನುವುದು ಕರೀನಾ ಅಭಿಪ್ರಾಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry