`ದಯವಿಟ್ಟು ಟಿಕೆಟ್ ನೀಡಿ'

7

`ದಯವಿಟ್ಟು ಟಿಕೆಟ್ ನೀಡಿ'

Published:
Updated:
`ದಯವಿಟ್ಟು ಟಿಕೆಟ್ ನೀಡಿ'

ಬೆಂಗಳೂರು: ಇದು ಕ್ರಿಕೆಟ್ ಮೇಲಿನ ಪ್ರೀತಿಯೋ, ಅತಿಯಾದ ಅಭಿಮಾನವೋ ಎಂಬುದು ತಿಳಿಯದು. ಭಾರತ- ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಆಗಮಿಸಿರುವ ಪಾಕಿಸ್ತಾನದ ಅಭಿಮಾನಿಯೊಬ್ಬ `ದಯವಿಟ್ಟು ನನಗೊಂದು ಟಿಕೆಟ್ ನೀಡಿ' ಎಂಬ ಭಿತ್ತಿಪತ್ರ ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸುತ್ತಾಡುತ್ತಿದ್ದದ್ದು ಸೋಮವಾರ ಎಲ್ಲರ ಗಮನ ಸೆಳೆಯಿತು.ಮೊಹಮ್ಮದ್ ಬಶೀರ್ ಎಂಬ ಈ ಅಭಿಮಾನಿ ಪಂದ್ಯ ನೋಡಲಿಕ್ಕಾಗಿ ದೂರದ ಷಿಕಾಗೊದಿಂದ ಆಗಮಿಸಿದ್ದಾನೆ. `ಪಿಕಾಗೊದಿಂದ ಕರಾಚಿಗೆ ಆಗಮಿಸಿ, ಅಲ್ಲಿಂದ ನವದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದೇನೆ. ಆದರೆ ಪಂದ್ಯದ ಟಿಕೆಟ್ ಇಲ್ಲ. ದಯವಿಟ್ಟು ಒಂದು ಟಿಕೆಟ್ ನೀಡಿ' ಎಂದು ಎಲ್ಲರಲ್ಲೂ ಕೇಳುತ್ತಿದ್ದದ್ದು ಕಂಡುಬಂತು.ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎರಡೂ ಟ್ವೆಂಟಿ-20 ಪಂದ್ಯಗಳಿಗೆ ಬಿಸಿಸಿಐನಿಂದ ಯಾವುದೇ ಟಿಕೆಟ್ ಕೇಳಿರಲಿಲ್ಲ. ಆದರೂ ಈ ಅಭಿಮಾನಿ ಬೆಂಗಳೂರಿಗೆ ಆಗಮಿಸಿದ್ದು ಅಚ್ಚರಿ ಉಂಟುಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry