ಸೋಮವಾರ, ಮೇ 23, 2022
26 °C

ದಯಾಮರಣ: ಆಯ್ದ ರಾಷ್ಟ್ರಗಳ ಸಾಲಿಗೆ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅತ್ಯಂತ ಅಪರೂಪದ ಸಂದರ್ಭದಲ್ಲಿ ಸಹ್ಯ ದಯಾಮರಣ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡುವುದರೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ದಯಾಮರಣದ ಅವಕಾಶ ನೀಡಿದ ಆಯ್ದ ರಾಷ್ಟ್ರಗಳ ಸಾಲಲ್ಲಿ ಭಾರತವೂ ನಿಂತಂತಾಗಿದೆ.ಬೆಲ್ಜಿಯಂ, ಲುಕ್ಸಂಬರ್ಗ್, ನೆದರ್ಲೆಂಡ್ಸ್, ಸ್ವಿಟ್ಜರ್ಲೆಂಡ್, ಅಮೆರಿಕದ ಓರೆಗಾನ್ ಮತ್ತು ವಾಷಿಂಗ್ಟನ್ ರಾಜ್ಯಗಳಲ್ಲಿ ರೋಗಿಯ ಒಪ್ಪಿಗೆ ಪಡೆದು ನೀಡುವ ದಯಾಮರಣವನ್ನು ‘ಸ್ವಯಂಪ್ರೇರಿತ ದಯಾಮರಣ’ ಎಂದು ವ್ಯಾಖ್ಯಾನಿಸಲಾಗುತ್ತದೆ. ಇಲ್ಲೆಲ್ಲ ರೋಗಿ ತನ್ನ ಸಾವನ್ನು ವೈದ್ಯರ ಸಹಾಯದೊಂದಿಗೆ ತರಿಸಿಕೊಂಡರೆ ಅದಕ್ಕೆ ‘ಸಹಾಯ ಪಡೆದು ಆತ್ಮಹತ್ಯೆ’ ಎಂದು ಹೇಳಲಾಗುತ್ತದೆ.ತನ್ನ ಇಚ್ಛೆಯನ್ನು ಪ್ರಕಟಪಡಿಸುವ ಸ್ಥಿತಿಯಲ್ಲಿ ರೋಗಿ ಇಲ್ಲದಾಗ ಆತನಿಗೆ ನೀಡುವ ದಯಾಮರಣವನ್ನು ಸ್ವಯಂಪ್ರೇರಿತ ಅಲ್ಲದ ದಯಾಮರಣ ಎಂದು ಕರೆಯಲಾಗುತ್ತದೆ. ಐರ್ಲೆಂಡ್‌ನಲ್ಲಿ ಸಹ್ಯ ದಯಾಮರಣಕ್ಕೆ ಅವಕಾಶ ಇದೆ. ಇನ್ನೂ ಕೆಲವು ದೇಶಗಳಲ್ಲಿ ದಯಾಮರಣ ಸಂಬಂಧ ಕಾನೂನುಗಳನ್ನು ರೂಪಿಸುವ ಪ್ರಯತ್ನ ನಡೆದಿದ್ದರೂ ಅವುಗಳಿಗೆ ಸಮ್ಮತಿ ದೊರೆತಿಲ್ಲ ಅಥವಾ ಅವುಗಳು ತಿರಸ್ಕರಿಸಲ್ಪಟ್ಟಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.