ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ: ಫಲಿತಾಂಶ ಪ್ರಕಟ

7

ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ: ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ಇಲ್ಲಿಯ ದ.ರಾ.ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ‘ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ-04’ರ ಫಲಿತಾಂಶವನ್ನು ಪ್ರಕಟಿಸಿದ್ದು, ಬಹುಮಾನಿತರ ವಿವರ ಇಂತಿದೆ.ಮೊದಲನೇ ಬಹುಮಾನ (ರೂ. 3,500 ನಗದು)-ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ದ್ವಿತೀಯ ಎಂ.ಎ. (ಇಂಗ್ಲಿಷ್) ವಿದ್ಯಾರ್ಥಿ ಇಸ್ಮಾಯಿಲ್ ಜಬಿಉಲ್ಲಾ. ಎರಡನೇ ಬಹುಮಾನ (ರೂ. 2,500 ನಗದು)-ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಎಂ.ಎ. (ಕನ್ನಡ) ಪ್ರಥಮ ವರ್ಷದ ವಿದ್ಯಾರ್ಥಿನಿ ಕವಿತಾ ಚ.ಗೌಡದ, ಮೂರನೇ ಬಹುಮಾನ (ರೂ. 1500 ನಗದು)-ಗುಲ್ಬರ್ಗ ವಿ.ವಿ. ಕರ್ನಾಟಕ ಕಾಲೇಜು ಸ್ನಾತಕೋತ್ತರ ಕೇಂದ್ರ ಬೀದರ್‌ನ ದ್ವಿತೀಯ ಎಂ.ಎ. (ಕನ್ನಡ) ವಿದ್ಯಾರ್ಥಿನಿ ಪವಿತ್ರಾ ಎಂ.ದ.ರಾ.ಬೇಂದ್ರೆ ಅವರ ಜನ್ಮದಿನವಾದ ಜನವರಿ 31ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದ.ರಾ.ಬೇಂದ್ರೆ ಕಾವ್ಯಕೂಟದ ಅಧ್ಯಕ್ಷ ಡಾ.ಜಿ.ಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry