ದರೋಡೆಕೋರರ ಬಂಧನ

ಭಾನುವಾರ, ಜೂಲೈ 21, 2019
25 °C

ದರೋಡೆಕೋರರ ಬಂಧನ

Published:
Updated:

ಹೈದರಾಬಾದ್ (ಐಎಎನ್‌ಎಸ್): ಹರಿಯಾಣ ಮೂಲದ ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿರುವ ಇಲ್ಲಿನ ಪೊಲೀಸರು ಅವರಿಂದ ವಿವಿಧ ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಹಾಗೂ ದುಷ್ಕತ್ಯಕ್ಕೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಮೊಹಮ್ಮದ್ ಆರಿಫ್ ಆಲಿಯಾಸ್ ಶೋಯಲ್ ಹಾಗೂ ಆತನ ಸಹಚರ ಮೊಹಮ್ಮದ್ ಜಾಹಿದ್ ಖಾನ್ ಎಂಬ ಆರೋಪಿಗಳನ್ನು ಮೇವಾತ್ ಜಿಲ್ಲೆಯ ಫಲಾಕ್ನುಮಾ ಪ್ರದೇಶದ ಬಳಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ಮೂರು ಪಿಸ್ತೂಲ್, ಒಂದು ರಿವ್ವಾಲರ್, ನಾಲ್ಕು ಲಘು ಬಂದೂಕುಗಳು, ಮೂರು ಬೈಕ್‌ಗಳು ಸೇರಿದಂತೆ ಒಂಬತ್ತು ವಾಹನಗಳು ಹಾಗೂ ನಗದು 26 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಜುಲೈ 7ರಂದು ಹೈದರಾಬಾದ್‌ನಲ್ಲಿ  ದರೋಡೆ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದು ನಂತರ ಪರಾರಿಯಾಗಿದ್ದರು.ಹೈದರಾಬಾದ್‌ನ ಮಿಶ್ರಿಗಂಜ್ ಪ್ರದೇಶದಲ್ಲಿ ವಾಸವಾಗಿದ್ದ ಆರಿಫ್ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಇಲ್ಲಿನ ಭೂ ಕಬಳಿಕೆದಾರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry