ಭಾನುವಾರ, ಮಾರ್ಚ್ 7, 2021
19 °C

ದರೋಡೆ, ಕಳವು ಪ್ರಕರಣ ಬೇಧಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದರೋಡೆ, ಕಳವು ಪ್ರಕರಣ ಬೇಧಿಸಿದ ಪೊಲೀಸರು

ಗದಗ: ಲಾರಿ ದರೋಡೆ ಮತ್ತು ಎರಡು ಮನೆ­ಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹತ್ತು ಲಕ್ಷ ರೂಪಾಯಿ ಮೌಲ್ಯದ ವಸ್ತು­ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಲಕ್ಕುಂಡಿ ಸಮೀಪ ನಡೆದ ಲಾರಿ ದರೋಡೆ ಮತ್ತು ಮುಂಡರಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ­ಗಳ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಸ್‌.ಡಿ.ಶರಣಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.ಲಾರಿ ದರೋಡೆ: ಫೆ. 10ರಂದು ಸ್ಟೀಲ್‌ ರಾಡ್‌ಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನಿಗೆ ಮಾರಾಕಸ್ತ್ರ ತೋರಿಸಿ ಬೆದರಿಸಿ ಮಾಲು ಸಮೇತ ಲಾರಿ ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಕೊಲ್ಹಾಪುರದ ಜಹಾಂಗೀರ ಮತ್ತು ಸಚಿನ್‌ ರಮೇಶ ಪರದೇಶಿ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಐವರ ತಂಡ ದರೋಡೆ ನಡೆಸಿರುವುದು ಗೊತ್ತಾಯಿತು. ತಲೆ ಮರೆಸಿಕೊಂಡಿರುವ ಹುಬ್ಬಳ್ಳಿಯ ಮೂವರು ಆರೋಪಿಗಳಾದ ಮೈನುದ್ದೀನ ಅಬೂಬ ಅಕ್ತರ ಪುಣಿಚಂದ, ಅಫ್ಜಲ ಅಬ್ದುಲ ರಹಿಮಾನ ಬಸರಿಕಟ್ಟಿ ಮತ್ತು ಸಮೀರ ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.ಆರೋಪಿಗಳ ಪತ್ತೆಗೆ ಶ್ರಮಿಸಿದ ಗ್ರಾಮೀಣ ಸಿಪಿಐ ಎಂ.ಜಗದೀಶ, ಪಿಎಸ್‌ಐ ನವೀನ ಜಕ್ಕಲಿ, ಬಿ.ಜಿ.ಸುಬ್ಬಾಪೂರಮಠ, ಮುಳಗುಂದ ಠಾಣೆ ಪಿಎಸ್ಐ ಪರಮೇಶ್ವರ ಕವಟಗಿ, ಪೇದೆಗಳಾದ ಬಸವರಾಜ ಗುಡ್ಲಾನೂರ, ಮಹಾವೀರ ಸದರನ್ನವರ, ಗುರುರಾಜ ಬೂದಿಹಾಳ, ಆನಂದ ದೊಡ್ಡಮನಿ, ಯಲ್ಲಪ್ಪ ಮಾದರ, ಹೇಮಂತ ಹಂಚಿನಾಳ, ರಾಜಶೇಖರ ಹಾದಿ, ಮಾಬೂಸಬ ವಡ್ಡಟ್ಟಿ, ಶಿವಾನಂದ ಗುಡ್ಡಿಮಠ, ರಾಜು ಬೆನ್ನೂರ, ವೆಂಕನಗೌಡ ಭರಮಗೌಡ್ರ, ಮಹೇಶ ಡಂಬಳ, ಶಿವಕುಮಾರ ಹೊಂಬಾಳಿ ಮಠ, ರಮೇಶ ಹೊಸಮನಿ ಅವರಿಗೆ ವಿಶೇಷ ಬಹು­ಮಾನ ಘೋಷಣೆ ಮಾಡಲಾಗಿದೆ ಎಂದರು.2 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಮುಂಡರಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2013ರ ಅ.4 ಮತ್ತು 2014ರ ಫೆ. 25ರಂದು ನಡೆದಿದ್ದ ಮನೆ ಕಳವು ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ  ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.ಎರಡು, ಮೂರು ತಿಂಗಳಿನಿಂದ ಪ್ರಕರಣಗಳ ತನಿಖೆ ನಡೆಸಿದಾಗ ಎರಡು ಮನೆಗಳ ಕಳ್ಳತನ ಒಂದೇ ವ್ಯಕ್ತಿ ಮಾಡಿರುವುದು ಗೊತ್ತಾಯಿತು.  ಯಲಬುರ್ಗಾದ ಆರೋಪಿ ಮಾಬುಸಾಬ ಹುಸೇನಸಾಬ ಚೋರಗಸ್ತಿ ಎಂಬಾತನನ್ನು ಪೊಲೀ­ಸರು ಬಂಧಿಸಿ, 2ಲಕ್ಷ ಮೌಲ್ಯದ ಚಿನ್ನಾಭರಣ, ಕಳವು ಹಣದಲ್ಲಿ ಖರೀದಿಸಿದ್ದ ಮೊಬೈಲ್‌ ಫೋನ್‌ ಹಾಗೂ ಸೌಂಡ್‌ ಸಿಸ್ಟಮ್‌ ಉಪಕರಣ ವಶಪಡಿಸಿಕೊಂಡಿದ್ದಾರೆ. ಕಳ್ಳತನ ಮಾಡಲು  ಮಾಬುಸಾಬ ಬಾಲಕನೊಬ್ಬನನ್ನು ಬಳಸಿಕೊಂಡಿದ್ದಾನೆ. ಬಾಲಕನನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರು ಪಡಿಸಲಾಗುವುದು. ಪ್ರಕರಣ ಪತ್ತೆ ಮಾಡಿದ ಮುಂಡರಗಿ ಪೊಲೀಸ್‌ ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ ಎಂದು ಶರಣಪ್ಪ ತಿಳಿಸಿದರು.ಅವಳಿನಗರದಲ್ಲಿ ಸಿಸಿಟಿವಿ ಅಳವಡಿಕೆ

ಗದಗ: ಅಪರಾಧ ಪತ್ತೆ ಮತ್ತು ತಡೆಗೆ ಅವಳಿ ನಗರದ 12 ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ  ಅಳವಡಿಸಲಾಗಿದೆ.

ಸುರಕ್ಷತೆ ದೃಷ್ಟಿಯಿಂದ ನಗರದ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಈ ಕಾರ್ಯವನ್ನು ಹುಬ್ಬಳ್ಳಿಯ ಟ್ರಿನಿಟಿ ಟೆಕ್ನಾಲಜಿ ಎಂಬ ಖಾಸಗಿ ಸಂಸ್ಥೆ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಸ್‌.ಡಿ.ಶರಣಪ್ಪ ತಿಳಿಸಿದರು.ಎರಡು ಮೆಗಾ ಪಿಕ್ಸಲ್‌ ಕ್ಯಾಮೆರಾ, 25 ದಿನ ಬ್ಯಾಕ್‌ ಅಪ್ ಮತ್ತು ಯುಪಿಎಸ್‌ ಸೌಲಭ್ಯ ಕಲ್ಪಿಸಲಾಗಿದೆ. ಕ್ಯಾಮೆರಾ ಸೆರೆ ಹಿಡಿಯುವ ದೃಶ್ಯ ಕಂಪ್ಯೂಟರ್‌ ಪರದೆಯಲ್ಲಿ ಮೂಡಿ ಬರುತ್ತದೆ. ಇದನ್ನು ನೋಡಿದ ಸಿಬ್ಬಂದಿ ಅಗತ್ಯವಿರುವ ಕಡೆ ವೈರಲೆಸ್‌ ಮೂಲಕ ಸಂಬಂಧಪಟ್ಟ ಪೊಲೀಸರಿಗೆ ಸೂಚನೆ ನೀಡಬಹುದು. ಕೇಂದ್ರಿಕೃತ ನಿಯಂತ್ರಣ ಕೊಠಡಿಯನ್ನು ಕಂಟ್ರೋಲ್‌ ರೂಂನಲ್ಲಿ ಸ್ಥಾಪಿಸಲಾಗಿದ್ದು, 24X7 ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.