ದರ್ಜಿಗಳಿಗೆ ಸರ್ಕಾರದ ಸಹಾಯ ಅಗತ್ಯ

7

ದರ್ಜಿಗಳಿಗೆ ಸರ್ಕಾರದ ಸಹಾಯ ಅಗತ್ಯ

Published:
Updated:

ಗುಲ್ಬರ್ಗ: ತಮ್ಮ ದುಡಿಮೆಯ ಮೂಲಕ ಮರ್ಯಾದೆಯಿಂದ ಜೀವನ ಸಾಗಿಸುತ್ತಿರುವ ದರ್ಜಿಗಳಿಗೆ ಸರ್ಕಾರದ ಸಹಾಯ-ಸವಲತ್ತುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್ಸ್‌ನ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದರ್ಜಿಗಳಾದವರು ಸಹ ವೃತ್ತಿಯಲ್ಲಿ  ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳುತ್ತ ಹೊಸ ವಿನ್ಯಾಸ ಹಾಗೂ ಉತ್ತಮ ಗುಣಮಟ್ಟ ಕಾಯ್ದುಕೊಂಡು ಬರಬೇಕು. ಅಂದಾಗ ಮಾತ್ರ ವೃತ್ತಿಗೆ ಬೇಡಿಕೆ ಬರುತ್ತದೆ ಎಂದು ತಿಳಿಸಿದರು.ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ರೇವೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಲ್ಲಿಕಾರ್ಜುನ ಘನಾತೆ, ಲಕ್ಷ್ಮಿ ಎಂ. ಕುಲ್ಕರ್ಣಿ, ಶಾಂತೇಶ್ವರ ಬುಜುರಕೆ, ಜಗನ್ನಾಥ ಪಿ. ವಾಗ್ಮೋಡೆ, ನರೇಶಕುಮಾರ ಜಿಂದೆ ಮತ್ತು ಇತರರು ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿದ್ದ ಕೆಎಸ್‌ಟಿಎ ಜಿಲ್ಲಾ ಅಧ್ಯಕ್ಷ ಮಹಾದೇವ ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿನ 30 ಸಾವಿರ ಜನ ಹೊಲಿಗೆ ವೃತ್ತಿ ಬಾಂಧವರಿದ್ದು, ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು. ಅನೀಲಸಿಂಗ್ ಬಿ. ಮುಕ್ತೇದಾರ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ದ್ಯಾಮಾ ವಂದಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಎಲ್ಲ ಹೊಲಿಗೆ ವೃತ್ತಿ ಬಾಂಧವರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry