ಬುಧವಾರ, ಮೇ 12, 2021
18 °C

ದರ್ಶನ್ ಚಿತ್ರಗಳನ್ನು ನಿಷೇಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಟಿ ನಿಖಿತಾರವರನ್ನು ಕನ್ನಡ ಚಲನಚಿತ್ರ ರಂಗದಿಂದ ಮೂರು ವರ್ಷಗಳ ಕಾಲ ನಿಷೇಧಿಸಿರುವ ಕ್ರಮ ಅಕ್ಷಮ್ಯ. ಈ ಕ್ರಮ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೈತಿಕ ದಿವಾಳಿತನವನ್ನು ಜಗಜ್ಜಾಹೀರು ಮಾಡಿದೆ.ದರ್ಶನ್ ಬಂಧನ ಆದಾಗಿನಿಂದ ಕನ್ನಡ ಚಲನಚಿತ್ರ ಕ್ಷೇತ್ರದ ಬಹುತೇಕ ಜನರು ಅವರನ್ನು ಸಮರ್ಥಿಸುತ್ತಿರುವ ರೀತಿ ನೋಡಿದರೆ ಅಸಹ್ಯ ಹುಟ್ಟಸುತ್ತಿದೆ. ತಮ್ಮ ಪತ್ನಿಯೊಂದಿಗೆ ಅತ್ಯಂತ ಹೀನಾಯವಾಗಿ ವರ್ತಿಸಿರುವ ಈ ನಟನನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಮೊದಲು ನಿಷೇಧಿಸುವ ದಿಟ್ಟತನವನ್ನು ಪ್ರದರ್ಶಿಬೇಕಾಗಿತ್ತು.ಆದರೆ ನಟ ದರ್ಶನ್ ರಕ್ಷಣೆಗೆ ಇಳಿದಿರುವ ಈ ಜನ ನಟಿ ನಿಖಿತಾ ಅವರನ್ನು ನಿಷೇಧಿಸುವ ಮೂಲಕ ತಮ್ಮ ಮಹಿಳಾ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ (ಯಾವುದೇ ಸಕಾರಣವಿಲ್ಲದೆ).ತಕ್ಷಣ ಕನ್ನಡ ಚಲನಚಿತ್ರ ರಂಗದ ಪ್ರಜ್ಞಾವಂತರು ಈ ಕ್ರಮವನ್ನು ಖಂಡಿಸಿ ನಟಿ ನಿಖಿತಾ ಪರ ಧ್ವನಿ ಎತ್ತುವುದರ ಮೂಲಕ, ದರ್ಶನ್ ನಟನೆಯ  ಚಿತ್ರಗಳನ್ನು ನಿಷೇಧಿಸಲು ಒತ್ತಾಯಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.