ಬುಧವಾರ, ಆಗಸ್ಟ್ 21, 2019
22 °C

ದರ್ಶನ್ ಚೇತರಿಕೆ

Published:
Updated:

ಬೆಂಗಳೂರು: ಬೃಂದಾವನ ಸಿನಿಮಾ ಚಿತ್ರೀಕರಣದ ವೇಳೆ ಕತ್ತು ಉಳುಕಿದ್ದರಿಂದ ನಗರದ ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಶನಿವಾರ ಮಧ್ಯಾಹ್ನ ಮನೆಗೆ ಮರಳಿದರು.`ಎಂಆರ್‌ಐ ಮತ್ತು ಸಿ.ಟಿ.ಸ್ಕ್ಯಾನ್ ಮಾಡಿದ ನಂತರ ದರ್ಶನ್ ಚೇತರಿಸಿಕೊಂಡಿದ್ದು, ಮಧ್ಯಾಹ್ನ ಒಂದು ಗಂಟೆಗೆ ಅವರನ್ನು ಮನೆಗೆ ಕಳುಹಿಸಲಾಯಿತು. ಒಂದು ವಾರ ವಿಶ್ರಾಂತಿ ಪಡೆದರೆ ಅವರು ಸಂಪೂರ್ಣ ಗುಣಮುಖರಾಗಲಿದ್ದಾರೆ' ಎಂದು ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ.ವೆಂಕಟರಮಣ ತಿಳಿಸಿದರು.

ಮೈಸೂರಿನಲ್ಲಿ ಕಳೆದ ವಾರ ನಡೆದ `ಬೃಂದಾವನ' ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ದರ್ಶನ್ ಅವರ ಕತ್ತು ಉಳುಕಿತ್ತು.

Post Comments (+)