ದರ್ಶನ ದರ್ಪಣ / ಕೃಷಿ ದರ್ಪಣ

7

ದರ್ಶನ ದರ್ಪಣ / ಕೃಷಿ ದರ್ಪಣ

Published:
Updated:

ವ್ಯಥೆಯ ಕಥೆ

‘ಅಂದಗೆಟ್ಟ ಅಲಿಗದ್ದಾ’ (ಹ.ಸ.ಬ್ಯಾಕೋಡ) ಲೇಖನ ಕಾರವಾರ ಕಡಲ ತೀರಗಳ ದುಃಸ್ಥಿತಿಯ ಕಥೆ ಹೇಳಿತು. ಕಾರವಾರ ಮಾತ್ರವಲ್ಲ ರಾಜ್ಯದ ಬಹುತೇಕ ಕಡಲ ತೀರಗಳ ಕಥೆಯೂ ಇದೇ. ಸರ್ಕಾರ ಇತ್ತ ಗಮನ ಹರಿಸಬೇಕು.

-ಎಚ್. ಅನಂತರಾಂ, ಹುಲಿಯೂರುದುರ್ಗಪರಿಸರ ಕಾಳಜಿ

  ಸುಂದರ ಕಡಲು, ಕಾಡು, ಪಕ್ಷಿ, ಪ್ರಾಣಿ ಸಂಕುಲ ಕುರಿತು ಆಗಾಗ ಲೇಖನಗಳನ್ನು ಪ್ರಕಟಿಸುವ ಮೂಲಕ ಪ್ರಜಾವಾಣಿ ಜನರಲ್ಲಿ ಸುಂದರ ನಿಸರ್ಗದ ಬಗ್ಗೆ ಕಾಳಜಿ ಬೆಳೆಸುತ್ತಿದೆ. ನಿಸರ್ಗ ಹಾಳಾದಾಗ ಅಪಾರ ವ್ಯಥೆ ಆಗುತ್ತದೆ.

-ರಾಜೀವ್ ವಿಶ್ವನಾಥನ್, ಮೇಲುಕೋಟೆಸಕಾಲಿಕ

 ಜಿ.ಎಂ. ಶಿರಹಟ್ಟಿ ಅವರ ‘ಸರ್ವ ಧರ್ಮಗಳ ‘ಪುಣ್ಯ ಸ್ಥಳ’ ಲೇಖನ ಅತ್ಯಂತ ಸಕಾಲಿಕ ಮತ್ತು ಸ್ವಾಗತಾರ್ಹ.  ಉತ್ತರ ಕನ್ನಡ ಜಿಲ್ಲೆಗಳ ಕಾಡುಗಳಲ್ಲಿರುವ ಅಪರೂಪದ ಕೋತಿಗಳಾದ ಸಿಂಗಳೀಕಗಳನ್ನು ಪರಿಚಯಿಸುವ ಲೇಖನವೂ (ಎಂ.ಆರ್. ಮಂಜುನಾಥ್) ಇಷ್ಟವಾಯಿತು. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ  ಸಿಂಗಳೀಕಗಳು ಇವೆ.

-ಎಂ.ಎಲ್. ಲಕ್ಷ್ಮಣರಾವ್, ದಾವಣಗೆರೆಧಾರ್ಮಿಕ ಸಾಮರಸ್ಯ

ಗುಲ್ಬರ್ಗಾದ ಸಂತ ‘ಬಂದೇ ನವಾಜರ ದರ್ಗಾ’ (ರಶ್ಮಿ ಎಸ್)ವನ್ನು ಪರಿಚಯಿಸುವ ಲೇಖನ ಇಷ್ಟವಾಯಿತು. ಈ ದರ್ಗಾಕ್ಕೆ ಎಲ್ಲ ಧರ್ಮಿಯರೂ ನಡೆದುಕೊಳ್ಳುತ್ತಾರೆ. ಇದೇ ನಮ್ಮ ದೇಶದ ಧಾರ್ಮಿಕ ಸಾಮರಸ್ಯದ ಸಂಕೇತ.

-ಶಿವರಾಜ ಯತಗಲ್, ಲಿಂಗಸುಗೂರಶಾಂತಿ ಸಂಕೇತ

ಬಂದೇ ನವಾಜ್ ದರ್ಗಾ ಧಾರ್ಮಿಕ ಭಾವೈಕ್ಯತೆಯ ಸಂಕೇತ. ದರ್ಗಾದ ವಾಸ್ತು ಶೈಲಿ ಮನಮೋಹಕ. ನಮ್ಮ ಧಾರ್ಮಿಕ ಕೇಂದ್ರಗಳ ಶಾಂತಿ ಸಮನ್ವಯತೆ ಜನರ ಆದರ್ಶವಾಗಬೇಕು

-ನಸೀರ್ ಅಹ್ಮದ್, ಚನ್ನಪಟ್ಟಣಸಕಾಲಿಕ  

‘ಸುಧಾರಿತ ಈರುಳ್ಳಿ ತಳಿಗಳು’ ಮತ್ತು ಈರುಳ್ಳಿ ಬೀಜೋತ್ಪಾದನೆ ಕುರಿತ ಲೇಖನಗಳು ಸಕಾಲಿಕ. ಹೊಸ ತಳಿಯ ಈರುಳ್ಳಿ ಬೆಳೆದ ರೈತರ ಅನುಭಗಳನ್ನು ಕುರಿತ ಲೇಖನಗಳು ಪ್ರಕಟವಾದರೆ ಅನೇಕ ರೈತರಿಗೆ ಅನುಕೂಲ.

- ಮಾದೇವ, ನರಗುಂದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry