ದರ್ಶನ ದರ್ಪಣ

7

ದರ್ಶನ ದರ್ಪಣ

Published:
Updated:

ಹೆಮ್ಮೆಯ ಸಂಗತಿ

ಕೃಷಿ ಕಾರ್ಯಗಳಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಳ್ಳಲು ಹಿಂಜರಿಯುವ ನಮ್ಮ ಕೆಲವು ಜನರ ನಡುವೆ ಅವರಿಗೆ ಅಪವಾದವಾಗಿ, ಇಟಲಿಯ ಮಹಿಳೆ ಸ್ವಿಫಾನಿಯಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ನಮ್ಮ ಸಂಸ್ಕೃತಿಯನ್ನು ಗೌರವಿಸುವುದು ಹೆಮ್ಮೆಯ ಸಂಗತಿ.

 -ವಿಭಾ ಮುರಳೀಧರ್, ತುಮಕೂರು.ಜ್ಞಾನದ ತಾಣ

ಕುವೆಂಪುರವರ ಕುಪ್ಪಳಿಯ ಸಮೀಪ ದೇಸಿ ವಸ್ತುಗಳ ಸಹ್ಯಾದ್ರಿ ವಸ್ತುಸಂಗ್ರಹಾಲಯ ಸ್ಥಾಪಿಸಿರುವುದು ಸಂತಸದ ವಿಷಯ. ಶಾಲಾವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇದು ಜ್ಞಾನದ ತಾಣವಾಗಿದೆ. ಪ್ರವಾಸಿಗರಿಗೆ ಕವಿಮನೆ ಹಾಗೂ ವಸ್ತುಸಂಗ್ರಹಾಲಯ ವೀಕ್ಷಿಸಲು ಅನುಕೂಲ ಕಲ್ಪಿಸಿದವರಿಗೆ ಅಭಿನಂದನೆಗಳು.

 -ಸುರೇಶ ಅಂಗಡಿ, ಹೂವಿನ ಹಡಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry